‘ರಾಬರ್ಟ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಯಶಸ್ವಿ 50 ದಿನಗಳನ್ನ ಪೂರೈಸಿರುವ ರಾಬರ್ಟ್ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಈ ಸಿನಿಮಾ ಬೆಳ್ಳಿ ತೆರೆ ಹಾಗೂ ಸ್ಮಾಲ್ ಸ್ಕ್ರೀನ್ನಲ್ಲಿ ಬಿಡುಗಡೆ ಆಗಿ ಧೂಳ್ ಎಬ್ಬಿಸಿದೆ. ಸದ್ಯ ರಾಬರ್ಟ್ ಸಿನಿಮಾ ಈಗ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ. ಸಿನಿಮಾದ ಹಾಡುಗಳಿಗೆ ಜೂಕ್ ಬಾಕ್ಸ್ ಇರೋದು ಕಾಮನ್. ಆದರೆ, ದರ್ಶನ್ ರಾಬರ್ಟ್ ಸಿನಿಮಾದ ಡೈಲಾಗ್ಗಳ ಜೂಕ್ ಬಾಕ್ಸ್ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಅದಕ್ಕೆ ಕಾರಣ ರಾಬರ್ಟ್ ಸಿನಿಮಾದಲ್ಲಿರುವ ಕಿಕ್ ಜೊತೆಗೆ ಪಂಚಿಂಗ್ ಡೈಲಾಗ್ಗಳು.
ಈ ಚಿತ್ರ ಯಶಸ್ಸು ಆಗೋದಿಕ್ಕೆ ಕಾರಣವೇ ಚಿತ್ರದಲ್ಲಿರುವ ಪವರ್ ಫುಲ್ ಡೈಲಾಗ್ಗಳು. ಯುವ ಸಂಭಾಷಣೆಕಾರರಾದ ಮಜಾಟಾಕೀಸ್ ಖ್ಯಾತಿಯ ರಾಜಶೇಖರ್ ಹಾಗೂ ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ಈ ಡೈಲಾಗ್ ಬರೆದಿದ್ದಾರೆ.
ನಾವು ನೋಡೋಕೆ ಮಾತ್ರ ಕ್ಲಾಸ್.... ವಾರ್‌ಗೆ ಇಳಿದ್ರೆ ಫುಲ್ ಮಾಸ್, ಒಬ್ಬರ ಲೈಫ್‌ನಲ್ಲಿ ನಾವು ಹೀರೋ ಆಗ್ಬೇಕು ಅಂತಂದ್ರೆ, ಇನ್ನೊಬ್ಬರ ಲೈಫ್‌ನಲ್ಲಿ ವಿಲನ್ ಆಗಲೇಬೇಕು, ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು, ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು. ನನಗಿಂತ ಟೆರರ್ ಆಗಿರಬೇಕು..ನನಗಿಂತ ವೈಲೈಂಟ್ ಆಗಿರಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳುವ ಡೈಲಾಗ್ ಗಳು ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿದ್ದವು.
ಈ ಡೈಲಾಗ್ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಆನಂದ್ ಆಡಿಯೋ ಸಂಸ್ಥೆಗೆ, ದರ್ಶನ್ ಅಭಿಮಾನಿಗಳು ಕೇಳಿ ಕೊಂಡಿದ್ರಂತೆ. ಹೀಗಾಗಿ ಆಡಿಯೋ ಜೂಕ್ ಬಾಕ್ಸ್ ತರ, ಆನಂದ್ ಆಡಿಯೋ ಸಂಸ್ಥೆ ಡೈಲಾಗ್ ಜೂಕ್ ಬಾಕ್ಸ್ ಮಾಡಿದ್ವಿ ಅಂತಾರೆ ಆನಂದ್ ಆಡಿಯೋ ಸಂಸ್ಥೆ ಮಾಲೀಕರಾದ ಶ್ಯಾಮ್.
- " class="align-text-top noRightClick twitterSection" data="">
ಮುಂದಿನ ದಿನಗಳಲ್ಲಿ ಕನ್ನಡದ ಎಲ್ಲಾ ಸ್ಟಾರ್ಗಳ ಸಿನಿಮಾಗಳ ಡೈಲಾಗ್ಗಳನ್ನ, ಡೈಲಾಗ್ ಜೂಕ್ ಬಾಕ್ಸ್ ಮಾಡಲು ನಿರ್ಧರಿಸಿದ್ದೇವೆ ಅಂತ ಆನಂದ್ ಆಡಿಯೋ ಮಾಲೀಕರು ಹೇಳಿದ್ದಾರೆ. ಈ ಟ್ರೆಂಡ್ ದರ್ಶನ್ ಅವರ ರಾಬರ್ಟ್ ಸಿನಿಮಾದಿಂದ ಶುರುವಾಗಿದೆ. ಈಗಾಗ್ಲೇ ರಾಬರ್ಟ್ ಸಿನಿಮಾದ ಹಾಡುಗಳನ್ನ ಮಿಲಿಯನ್ ಗಟ್ಟಲೆ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ರಾಬರ್ಟ್ ಸಿನಿಮಾದ ಡೈಲಾಗ್ಗಳನ್ನ ಎಷ್ಟು ಮಿಲಿಯನ್ ಜನ ನೋಡ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.