ಲಂಡನ್: ಭಾನುವಾರ ನಡೆದ ಬಾಂಗ್ಲಾ ಮತ್ತು ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಆಚೆ ನಿಂತಿದ್ದ ಪೋಟೋಗ್ರಾಫರ್ ಬ್ಯಾಟ್ಸ್ಮನ್ ಸಿಕ್ಸ್ಗಟ್ಟುವ ಭಂಗಿಯನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವುದರ ಜೊತೆಗೆ ಬಾಲನ್ನು ಒಂದೇ ಕೈಯಲ್ಲಿಡಿದು ಸ್ಟಾರ್ ಆಗಿದ್ದಾನೆ.
ದ.ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿಸ್, ಮೊಸದಿಕ್ ಹುಸೇನ್ ಓವರ್ನಲ್ಲಿ ಸಿಕ್ಸರ್ ಮೂಲಕ ಅರ್ಧಶತಕ ಪೂರೈಸಿದ್ದರು. ಈ ವೇಳೆ ಪೆವಿಲಿಯನ್ ಬಳಿ ನಿಂತಿದ್ದ ಇಯಾನ್ ಕಿಂಗ್ಟನ್ ಎಂಬ ಫೋಟೋಗ್ರಾಫರ್ ಪ್ಲೆಸಿಸ್ ಹೊಡೆದ ಬಾಲನ್ನು ತಮ್ಮ ಬಲಗೈವೊಂದರಲ್ಲೇ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಈ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಎಡಗೈಯಲ್ಲಿ ದೊಡ್ಡ ಕ್ಯಾಮರಾ ಹಿಡಿದುಕೊಂಡಿದ್ದು ವಿಶೇಷವಾಗಿತ್ತು.
-
Looks like @benstokes38 has some competition for incredible catches in the deep!
— ICC (@ICC) June 2, 2019 " class="align-text-top noRightClick twitterSection" data="
👏 to this multi-talented #CWC19 photographer! pic.twitter.com/r7EiVbwOEt
">Looks like @benstokes38 has some competition for incredible catches in the deep!
— ICC (@ICC) June 2, 2019
👏 to this multi-talented #CWC19 photographer! pic.twitter.com/r7EiVbwOEtLooks like @benstokes38 has some competition for incredible catches in the deep!
— ICC (@ICC) June 2, 2019
👏 to this multi-talented #CWC19 photographer! pic.twitter.com/r7EiVbwOEt
ಆ ಫೋಟೋಗ್ರಾಫರ್ ಪಡೆದ ಕ್ಯಾಚ್, ಮೊದಲ ಪಂದ್ಯದಲ್ಲಿ ಬೆನ್ಸ್ಟೋಕ್ಸ್ ಹಿಡಿದ ಕ್ಯಾಚ್ನಷ್ಟೇ ಆಕರ್ಷಣೀಯವಾಗಿತ್ತು ಎಂದು ಹೇಳಲಾಗುತ್ತಿದೆ. ಈ ಕ್ಯಾಚ್ ಅನ್ನು ಕ್ಲಾಸಿಕ್ ಕ್ಯಾಚ್ ಎಂದು ಕಾಮೆಂಟೇಟರ್ ಮಾರ್ಕ್ ನಿಕೋಲ್ಸ್ ತಿಳಿಸಿದ್ದಾರೆ.
ಪ್ಲೆಸಿಸ್ ಸಿಕ್ಸರ್ ಹೊಡೆಯುವಾಗ ನಾನು ಅವರ ಎರಡು ಪೋಟೋಗಳನ್ನು ತೆಗೆದಿದ್ದೆ, ನಂತರ ಬಾಲ್ ನನ್ನತ್ತ ಬರುವುದನ್ನು ನೋಡಿದ ತಕ್ಷಣ ಸ್ವಲ್ಪ ಮುಂದೆ ಹೋಗಿ ಹಿಡಿದೆ ಎಂದು ಕಿಂಗ್ಟನ್ ಸಂತಸ ಹಂಚಿಕೊಂಡಿದ್ದಾರೆ. ಇವರು ಕ್ಯಾಚ್ ಹಿಡಿದ ಮೇಲೆ ಸೆಲೆಬ್ರೆಟಿಯಾಗಿದ್ದು, ಇವರ ಮೊಬೈಲ್ಗೆ ಶುಭ ಸಂದೇಶಗಳ ಸುರಿಮಳೆಯೇ ಬರುತ್ತಿದೆಯಂತೆ.