ETV Bharat / briefs

ಪಾಸಿಟಿವಿಟಿ ದರ ಶೇ 4.56 ಕ್ಕೆ ಇಳಿಕೆ: 6,835 ಜನರಿಗೆ ಸೋಂಕು ದೃಢ - ಕರ್ನಾಟಕ ಕೊರೊನಾ ಪಾಸಿಟಿವಿಟಿ ಪ್ರಕರಣ

ರಾಜ್ಯದಲ್ಲಿ ಕೊರೊನಾ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗುತ್ತಿದೆ. ಇಂದು 6835 ಮಂದಿಗೆ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ 4.56ಕ್ಕೆ ಇಳಿಕೆ ಕಂಡಿದೆ.

ಕೋವಿಡ್​ ಪಾಸಿಟಿವ್
ಕೋವಿಡ್​ ಪಾಸಿಟಿವ್
author img

By

Published : Jun 14, 2021, 7:46 PM IST

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ ದರ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, 6835 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,71,969ಕ್ಕೆ ಏರಿಕೆಯಾಗಿದೆ. ಇನ್ನು ಪಾಸಿಟಿವಿಟಿ ದರ ಶೇ 4.56ಕ್ಕೆ ಇಳಿಕೆ ಕಂಡಿದೆ. 15,409 ಸೋಂಕಿತರು ಗುಣಮುಖರಾಗಿದ್ದು ಒಟ್ಟು 25,66,774 ಜನರು ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,72,141 ರಷ್ಟು ಇದೆ. ಕೋವಿಡ್​ಗೆ 120 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 33,033ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ ಶೇ 1.75 ರಷ್ಟು‌ ಇದೆ.‌

ಇನ್ನು ವಿಮಾನ ನಿಲ್ದಾಣದಿಂದ 363 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳ್ಳಪಟ್ಟಿದ್ದಾರೆ. ಯುಕೆಯಿಂದ 227 ಮಂದಿ ಆಗಮಿಸಿದ್ದು, 109 ಜನರಲ್ಲಿ ಯುಕೆ ರೂಪಾಂತರಿ ಸೋಂಕು ಪತ್ತೆಯಾಗಿದೆ. ಸೌತ್ ಆಫ್ರಿಕಾ ಸೋಂಕು 6 ಜನರಲ್ಲಿ ಹಾಗೂ ಡಬಲ್ ಮ್ಯುಟೇಷನ್ ಸೋಂಕು 244 ಜನರಲ್ಲಿ ಪತ್ತೆಯಾಗಿದೆ.

ಇನ್ನು ರಾಜಧಾನಿಯಲ್ಲಿ 1470 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 11,98,158 ಏರಿಕೆ ಆಗಿದೆ‌. 2409 ಮಂದಿ ಗುಣಮುಖರಾಗಿದ್ದು 10,97,794 ಡಿಸ್ಜಾರ್ಜ್ ಆಗಿದ್ದಾರೆ. 12 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 15,319 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 85,044 ರಷ್ಟು ಇದೆ.

ನಾಲ್ಕು ಜಿಲ್ಲೆಗಳಲ್ಲಿ ಶೂನ್ಯ ಸಾವು ಪ್ರಕರಣ: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕೋವಿಡ್​ನಿಂದ ಇಂದು ಯಾರು ಮೃತಪಟ್ಟಿಲ್ಲ. ಪಾಸಿಟಿವಿಟಿ ರೇಟ್​ ಕಡಿಮೆ ಇರುವ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣವೂ ಕಡಿಮೆ ಆಗಿರುವುದನ್ನ ಗಮನಿಸಬಹುದು.‌ ಬೀದರ್, ಗದಗ, ರಾಮನಗರ ಹಾಗೂ ಚಾಮರಾಜನಗರದಲ್ಲಿ ಸಾವು ಸಂಭವಿಸಿಲ್ಲ. ಚಾಮರಾಜನಗರದಲ್ಲಿ ಶೇ 11.60 ರಷ್ಟು ಪಾಸಿಟಿವಿಟಿ ದರವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.