ನವದೆಹಲಿ: ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಪ್ರಧಾನಿ ಮೋದಿ ಚೋರ್ ಹೈ ಎಂದು ಹೇಳಿಕೆ ನೀಡಿದ್ದ ರಾಹುಲ್ ಪ್ರಕರಣದ ವಿಚಾರಣೆಯನ್ನ ಸುಪ್ರೀಂಕೋರ್ಟ್ ಮೇ 6 ರಂದು ನಡೆಸಲಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಿಗೊಂಡ ಸುಪ್ರೀಂಕೋರ್ಟ್, ಮೀನಾಕ್ಷಿ ಲೇಖಿ ಪರ ವಕೀಲರ ವಾದವನ್ನ ಆಲಿಸಿತು.
ಮೀನಾಕ್ಷಿ ಲೇಖಿ ಪರ ವಾದಿಸಿದ ಮುಕುಲ್ ರೋಹಟಗಿ, ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಸುಪ್ರೀಂಕೋರ್ಟ್ ಹೆಸರು ಉಲ್ಲೇಖಿಸಿದ್ದಾರೆ. ಈ ಸಂಬಂಧ ಕೇವಲ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಕಾನೂನಿನ ಪ್ರಕಾರ ಅವರು ಬೇಷರತ್ ಆಗಿ ಕ್ಷಮೆ ಕೇಳಲೇಬೇಕು ಎಂದು ವಾದಿಸಿದರು.
ಮುಕುಲ್ ರೋಹಟಗಿ ವಾದಕ್ಕೆ ಪ್ರತಿವಾದ ಮಂಡಿಸಿದ ರಾಹುಲ್ ಗಾಂಧಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಮೈಲಾರ್ಡ್ , ನಾನು ಬಾಯಿ ತಪ್ಪಿ ಚೌಕಿದಾರ್ ಚೋರ್ ಹೈ ಎಂದು ಹೇಳಿದೆ. ಅದು ನನ್ನ ತಪ್ಪು ಎಂದರು. ಬಾಯಿ ತಪ್ಪಿನಿಂದಾಗಿ ಹೀಗೆ ಆಗಿದೆ. ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಕೆ ನೀಡಿಲ್ಲ ಸುಪ್ರೀಂಕೋರ್ಟ್ ಅನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದರು. ಇಬ್ಬರ ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನ ಮೇ ಆರಕ್ಕೆ ಮುಂದೂಡಿತು.