ನವದೆಹಲಿ: ದೆಹಲಿಯ ಆರು ಲೋಕಸಭಾ ಕ್ಷೇತ್ರಗಳಿಗೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ರಿಲೀಸ್ ಮಾಡಿದೆ. ಪ್ರಮುಖವಾಗಿ ಪಟ್ಟಿಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವಕಾಶ ಪಡೆದುಕೊಂಡಿದ್ದಾರೆ.
ಆಮ್ ಆದ್ಮಿ ಜತೆ ಸೇರಿ ಲೋಕಸಭಾ ಸ್ಪರ್ಧೆ ಎದುರಿಸಲು ಕಾಂಗ್ರೆಸ್ ಮುದ್ದಾಗಿತ್ತು. ಆದರೆ, ಮೈತ್ರಿ ಮಾತುಕತೆ ಮುರಿದು ಬಿದ್ದ ಕಾರಣ ಆರು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ.
-
Congress releases list of candidates for 6 out of 7 Parliamentary constituencies in Delhi. Former Delhi CM Sheila Dikshit to contest from North East Delhi. #LokSabhaElections2019 pic.twitter.com/p62NehK1Vu
— ANI (@ANI) April 22, 2019 " class="align-text-top noRightClick twitterSection" data="
">Congress releases list of candidates for 6 out of 7 Parliamentary constituencies in Delhi. Former Delhi CM Sheila Dikshit to contest from North East Delhi. #LokSabhaElections2019 pic.twitter.com/p62NehK1Vu
— ANI (@ANI) April 22, 2019Congress releases list of candidates for 6 out of 7 Parliamentary constituencies in Delhi. Former Delhi CM Sheila Dikshit to contest from North East Delhi. #LokSabhaElections2019 pic.twitter.com/p62NehK1Vu
— ANI (@ANI) April 22, 2019
ಪಟ್ಟಿಯಲ್ಲಿ ಪ್ರಮುಖವಾಗಿ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ದೆಹಲಿ ನಾರ್ಥ್ ಈಶಾನ್ಯ ಕ್ಷೇತ್ರದಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ವಿರುದ್ಧ ಬಿಜೆಪಿಯ ಮನೋಜ್ ತಿವಾರಿ ಹಾಗೂ ಎಎಪಿಯ ದಿಲೀಪ್ ಪಾಂಡೆ ಸ್ಪರ್ಧೆ ಮಾಡಿದ್ದಾರೆ. ಇತ ಹೊಸ ದೆಹಲಿಯಿಂದ ಅಜೇಯ ಮಕೇನ್ ಸ್ಪರ್ಧಿಸಲಿದ್ದಾರೆ.
ಉಳಿದಂತೆ ಚಾದಿನಿ ಚೌಕ್ನಿಂದ ಜೆಪಿ ಅಗರವಾಲ್, ಈಶಾನ್ಯ ಕ್ಷೇತ್ರದಿಂದ ಅರವಿಂದ್ ಸಿಂಗ್,ನಾರ್ಥ್ ವೆಸ್ಟ್ ದೆಹಲಿಯಿಂದ ರಾಜೇಶ್ ಲಿಲೋಥಿಯಾ ಹಾಗೂ ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ ಚಾನ್ಸ್ ಪಡೆದುಕೊಂಡಿದ್ದಾರೆ. ಈ ಎಲ್ಲ ಕ್ಷೇತ್ರಗಳಿಗೆ ಮೇ 12ರಂದು ಮತದಾನ ನಡೆಯಲಿದೆ.