ETV Bharat / briefs

ಭಾವನಾತ್ಮಕ ಆಕರ್ಷಣೆಯಿಂದ್ಲೇ ಬಿಜೆಪಿ ಗದ್ದುಗೆ ಏರಿದೆ : ದಿನೇಶ್ ಗುಂಡೂರಾವ್ - ಬೆಂಗಳೂರು

ಬೆಂಗಳೂರಿನ ಮನೋರಾಯನ ಪಾಳ್ಯ ವಾರ್ಡ್​ನಲ್ಲಿ ಹಮ್ಮಿಕೊಂಡಿದ್ದ ರಂಜಾನ್​ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡಿದರು.

ದಿನೇಶ್​ ಗುಂಡೂರಾವ್
author img

By

Published : Jun 1, 2019, 10:24 PM IST

ಬೆಂಗಳೂರು : ಕೆಲ ಭಾವನಾತ್ಮಕ ಆಕರ್ಷಣೆಗಳ ಮೂಲಕ ಇಂದು ಕೇಂದ್ರ ಸರ್ಕಾರ ರಚನೆಯಾಗಿದೆ. ಆದರೆ, ಕಾಂಗ್ರೆಸ್ ಯಾವತ್ತೂ ಮನುಷ್ಯತ್ವಕ್ಕೆ ಬೆಲೆ ಕೊಡುತ್ತದೆ. ಒಗ್ಗೂಡಿಸುವ ಕೆಲಸ ಮಾಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡುತ್ತಿರುವುದು
ಇಲ್ಲಿನ ಮನೋರಾಯನಪಾಳ್ಯ ವಾರ್ಡ್​ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಲಿಕೆ ಸದಸ್ಯ ಅಬ್ದುಲ್ ವಾಜಿದ್ ನೇತೃತ್ವವಹಿಸಿದ್ದರು. 2500 ಮುಸ್ಲಿಂ ಸಮುದಾಯದವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣಿ ಮತ್ತು ಶಾವಿಗೆ ಸೇರಿ ದಿನ ಬಳಕೆ ಆಹಾರ ಪದಾರ್ಥಗಳ ಕಿಟ್​ಗಳನ್ನು ಮತ್ತು ಹಸಿ ಕಸ, ಒಣಕಸ ಸಂಗ್ರಹಕ್ಕೆ ಡಬ್ಬಿಗಳನ್ನು ವಿತರಿಸಲಾಯಿತು. ಕಾಂಗ್ರೆಸ್ 130 ವರ್ಷದ ಇತಿಹಾಸವಿರುವ ಪಕ್ಷ. ಸೋಲು-ಗೆಲುವು ಏನೇ ಬರಲಿ, ಸಿದ್ದಾಂತಗಳನ್ನು ಎಂದೂ ಮರೆತಿಲ್ಲ ಎಂದು ಹೇಳಿದರು. ಹೆಬ್ಬಾಳ ಶಾಸಕರಾದ ಬೈರತಿ ಸುರೇಶ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಇದ್ದರು.

Intro:ಜನರಿಗೆ ಭಾವಾತ್ಮಕ ಆಕರ್ಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಚನೆಯಾಗಿದೆ- ದಿನೇಶ್ ಗುಂಡೂರಾವ್
ಬೆಂಗಳೂರು- ರಂಜಾನ್ ಹಬ್ಬದ ಪ್ರಯುಕ್ತ, ಮನೋರಾಯನಪಾಳ್ಯ ವಾರ್ಡ್ ನಲ್ಲಿ ಕಾರ್ಪೋರೇಟರ್ ಅಬ್ದುಲ್ ವಾಜಿದ್ ನೇತೃತ್ವದಲ್ಲಿ, ಕೆ.ಪಿ.ಸಿ.ಸಿ.ರಾಜ್ಯಾಧ್ಯಕ್ಷರು,ದಿನೇಶ್ ಗುಂಡೂರಾವ್ ರವರು ರಂಜಾನ್ ಉಡುಗೊರೆಗಳನ್ನು ನೀಡಿ ಮಾತಾಡಿದ ಅವರು, ಕೆಲ ಭಾವನಾತ್ಮಕ ಆಕರ್ಷಣೆಗಳ ಮೂಲಕ ಇವತ್ತು ಕೇಂದ್ರ ಸರ್ಕಾರ ರಚನೆಯಾಗಿದೆ. ಆದ್ರೆ ಕಾಂಗ್ರೆಸ್ ಪಕ್ಷ ಯಾವತ್ತೂ ಮನುಷ್ಯತ್ವಕ್ಕೆ ಬೆಲೆ ಕೊಡುತ್ತದೆ. ಕಟ್ಟುವ ಕೆಲಸ ಮಾಡುತ್ತದೆಯೇ ಹೊರತು ಒಡೆಯುವ ಕೆಲಸ ಮಾಡುವುದಿಲ್ಲ ಎಂದರು.
2500 ಮುಸ್ಲಿಂ ಸಮುದಾಯದವರಿಗೆ ಅಕ್ಕಿ ,ಬೇಳೆ ,ಅಡುಗೆ ಎಣ್ಣಿ ಮತ್ತು ಶಾವಿಗೆ ದಿನಬಳಕೆ ಆಹಾರ ಪದಾರ್ಥದ ಕಿಟ್ ಗಳನ್ನು ಮತ್ತು ಹಸಿ ಕಸ ,ಒಣಕಸ ಸಂಗ್ರಹಕ್ಕೆ ಡಬ್ಬಿಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ಮಾನವೀಯತೆ , ಮನುಷ್ಯತ್ವ ಪ್ರತಿಯೊಬ್ಬರಿಗೂ ಇರಬೇಕು .ಅಣ್ಣ,ತಮ್ಮಂದಿರಂತೆ ಎಲ್ಲ ವರ್ಗ ,ಧರ್ಮ ಜಾತಿಯವರು ಒಟ್ಟಾಗಿ ಬಾಳಿ ಬದುಕಬೇಕು .ಕಾಂಗ್ರೆಸ್ ಪಕ್ಷ 130 ವರ್ಷದ ಇತಿಹಾಸವಿರುವ ಪಕ್ಷ ,ಸೋಲು,ಗೆಲುವು ಬರಲಿ ಸಿದ್ದಾಂತಗಳನ್ನು ಎಂದು ಮರೆತಿಲ್ಲ ಎಂದು ಹೇಳಿದರು .ಹೆಬ್ಬಾಳ ಶಾಸಕರಾದ ಬೈರತಿ ಸುರೇಶ್ ರವರು ಮಾತನಾಡಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಸಮಾಜದ ಮುಖ್ಯವಾಹಿನಿ ತರುವುದು ನಮ್ಮ ಕರ್ತವ್ಯ .ಎಲ್ಲ ಜಾತಿ ,ಧರ್ಮದಲ್ಲಿ ಬಡವರು ,ಶ್ರೀಮಂತರು ಇದ್ದಾರೆ .ಬಡವರನ್ನು ಆರ್ಥಿಕವಾಗಿ ಸಬಲರಾಗಿ ಮಾಡಿ ಸಮ ಸಮಾಜ ನಿರ್ಮಾಣ ನಮ್ಮ ಗುರಿ ಎಂದರು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ,ಮಾತನಾಡಿ ರಂಜಾನ್ ಹಬ್ಬದಲ್ಲಿ ಆರ್ಥಿಕವಾಗಿ ಶ್ರೀಮಂತರಾದವರು ,ಬಡವರಿಗೆ ದಿನಬಳಕೆ ಅಹಾರ ಪದಾರ್ಥ ನೀಡಿ ರಂಜಾನ್ ಹಬ್ಬ ದಾನ ನೀಡುವ ದಾನಗಳ ಹಬ್ಬವಾಗಿ ಅಚರಿಸಲಾಗುತ್ತಿದೆ. ಮನೋರಾಯನ ಪಾಳ್ಯ ವಾರ್ಡ್ ಪ್ರತಿ ಮನೆಗೆ ತರಕಾರಿ ,ಹಾಲು ,ಮಾಂಸಹಾರ ತರಲು ಐದು ಬಟ್ಟೆ ಕೈ ಚೀಲ ವಿತರಿಸಲಾಗುವುದು ಇದ್ದರಿಂದ ಮನೋರಾಯನಪಾಳ್ಯ ಪ್ಲಾಸ್ಟಿಕ್ ಮುಕ್ತ ವಾರ್ಡ್ ಆಗಿ, ಪರಿಸರ ರಕ್ಷಣೆಯಾಗಲಿದೆ ಎಂದರು.
ಸೌಮ್ಯಶ್ರೀ
KN_BNG_01_01_ramzan_script_sowmya_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.