ವಾಷಿಂಗ್ಟನ್: ಕಳೆದೆರಡು ತಿಂಗಳಿನಿಂದ ನಡೆದ ಸಾರ್ವತ್ರಿಕ ಚುನಾವಣೆಯ ಮಹಾಫಲಿತಾಂಶ ಇಂದು ಹೊರಬೀಳಲಿದ್ದು ದೇಶಕ್ಕೆ ದೇಶವೇ ಕಾತರದಿಂದ ಕಾಯುತ್ತಿದೆ.
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯನ್ನು ಆಯ್ಕೆ ಮಾಡುವ ನಿರ್ಣಾಯಕ ದಿನಕ್ಕೆ ವಿಶ್ವದ ದೊಡ್ಡಣ್ಣ ಸಹ ಕುತೂಹಲದಿಂದ ನೋಡುತ್ತಿದೆ. ಅಮೆರಿಕದ ಸಿನಿಮಾ ಮಂದಿರಗಳಲ್ಲಿ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಳು ಲಭ್ಯವಾಗಲಿದೆ.
ಮತ ಎಣಿಕೆ ದಿನವೂ ಮಂಡ್ಯದಲ್ಲಿ ಕೇಬಲ್ ಕಟ್... ಗ್ರಾಮೀಣ ಭಾಗಗಳಲ್ಲಿ ದುಷ್ಕರ್ಮಿಗಳ ಕೃತ್ಯ
ಹೌದು, ಅಮೆರಿಕದ ಮಿನಿಯಪೊಲಿಸ್, ಮಿನೆಸೊಟ, ಟೆಕ್ಸಾಸ್, ಎಲಿನಾಯ್ಸ್, ಮಸುಚ್ಯುಸೆಟ್ಸ್, ಫ್ಲೋರಿಡಾ, ವಾಷಿಂಗ್ಟನ್ ಡಿಸಿ, ವರ್ಜಿನಿಯಾ, ಕ್ಯಾಲಿಫೋರ್ನಿಯ ರಾಜ್ಯಗಳ ಪ್ರಮುಖ ಚಿತ್ರಮಂದಿರಗಳಲ್ಲಿ ಫಲಿತಾಂಶದ ನೇರಪ್ರಸಾರವನ್ನು ನೀಡಲಿವೆ.
ಯಾರಾಗ್ತಾರೆ ಮುಂದಿನ ಪ್ರಧಾನಿ... ಲೋಕ ಫೈಟ್ನ ಕ್ಷಣ ಕ್ಷಣದ ಮಾಹಿತಿ!
ಈಗಾಗಲೇ ಹಲವೆಡೆ 150ಕ್ಕೂ ಅಧಿಕ ಮಂದಿ ಟಿಕೆಟ್ ಪಡೆದು ನೇರಪ್ರಸಾರ ವೀಕ್ಷಣೆಯನ್ನು ವೀಕ್ಷಿಸಲಿದ್ದಾರೆ. ಪ್ರತಿ ಟಿಕೆಟ್ ಬೆಲೆ 15 ಅಮೆರಿಕನ್ ಡಾಲರ್ ನಿಗದಿಪಡಿಸಲಾಗಿದೆ.
ಮೋದಿ ಅಭಿಮಾನಿಯಿಂದ ಪ್ಲಾನ್:
ಅಷ್ಟಕ್ಕೂ ಈ ಯೋಜನೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಹಾಗೂ ಮೋದಿ ಅಭಿಮಾನಿ ರಮೇಶ್ ನೂನೆ ಎನ್ನುವವರದ್ದಾಗಿದೆ. ಮೂಲತಃ ಇಂಜಿನಿಯರ್ ಆಗಿರುವ ರಮೇಶ್ ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿ. ಹೀಗಾಗಿ ಅಮೆರಿಕ ದೇಶದಲ್ಲಿ ಇದೇ ಮೊದಲ ಬಾರಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.