ಮುಂಬೈ: ಬ್ಯಾಟಿಂಗ್ ದೈತ್ಯ ಹಾಗೂ ಯೂನಿವರ್ಸಲ್ ಬಾಸ್ ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ವಿಶ್ವಕಪ್ಗಾಗಿ ಸಜ್ಜುಗೊಳ್ತಿದ್ದು, ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಇಷ್ಟು ದಿನ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಮೊರೆ ಹೋಗಿದ್ದ ಯುನಿವರ್ಸಲ್ ಬಾಸ್ ಇದೀಗ, ಯೋಗ ಹಾಗೂ ಮಸಾಜ್ ಮೊರೆ ಹೋಗಿದ್ದಾರೆ.
ವೆಸ್ಟ್ ಇಂಡೀಸ್ ಪರ 103 ಟೆಸ್ಟ್ ಪಂದ್ಯ ಹಾಗೂ 289 ಏಕದಿನ ಪಂದ್ಯಗಳನ್ನಾಡಿರುವ ಗೇಲ್, ಈ ಸಲದ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ನ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಮಾನಸಿಕ ಸ್ಥಿರತೆ ಹಾಗೂ ಮನೋಬಲ ಮುಖ್ಯವಾಗಿರುವುದನ್ನ ಅರಿತುಕೊಂಡಿರುವ ಗೇಲ್ ಪ್ರತಿದಿನ ಯೋಗಾಭ್ಯಾಸ ನಡೆಸುತ್ತಿದ್ದಾರೆ.
ವಿಶ್ವಕಪ್ ಮುಗಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಗೇಲ್, ಈ ಹಿಂದೆ ನಾಲ್ಕು ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ಆದರೆ ತಂಡ ವಿಶ್ವಕಪ್ ಗೆದ್ದಿಲ್ಲ. ಗೇಲ್ ಪಾಲಿಗೆ ಇದು ಕೊನೆಯ ವಿಶ್ವಕಪ್ ಆಗಿರುವ ಕಾರಣ, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.