ಮೈಸೂರು: ಮರದ ಮೇಲಿನ ಜಾಗವನ್ನು ಆಕ್ರಮಿಸಿಕೊಳ್ಳಲು ಚಿರತೆಗಳು ಪರಸ್ಪರ ಕಾದಾಡಿ ಗಾಯ ಮಾಡಿಕೊಂಡ ಘಟನೆ ನಾಗರಹೊಳೆಯ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಹಲವು ದಿನಗಳಿಂದ ಈ ಎರಡೂ ಚಿರತೆಗಳು ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಒಂದೇ ಮರದಲ್ಲಿ ವಿರಮಿಸಿಕೊಳ್ಳಲು ಇವುಗಳ ಮಧ್ಯೆ ಮೆಗಾ ಫೈಟ್ ನಡೆದಿದೆ. ಈ ವೇಳೆ ಮರದಿಂದ ಬಿದ್ದ ಕಪ್ಪು ಚಿರತೆ ಮುಖಕ್ಕೆ ಗಾಯವಾಗಿದೆ. ಈ ವಿಡಿಯೋ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್ ಆಗ್ತಿದೆ.