ETV Bharat / briefs

ಸೀತಾರಾಮನ್ ಮುಂದಿವೆ ರಫೇಲ್​ಗಿಂತ ಐದು ಕಠಿಣ ಸವಾಲು

ಏಷ್ಯಾ ಖಂಡದ ಬೆಳವಣಿಗೆಯ ಎಂಜಿನ್ ಸಾಗಬೇಕಾದರೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ ತನ್ನ ಕಾರ್ಯಾಚರಣೆ ಖಾಸಗಿ ವಲಯಕ್ಕೆ ವಿಸ್ತರಿಸಿ ಖಾಸಗಿ ವಲಯದ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಭಾರತದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಚ್ಚರಿಸಿದ್ದರು.

ಸಾಂದರ್ಭಿಕ ಚಿತ್ರ
author img

By

Published : Jun 1, 2019, 3:13 PM IST

ನವದೆಹಲಿ: ಮನೋಹರ್​​ ಪರಿಕ್ಕರ್ ಅವರಿಂದ ತೆರವಾಗಿದ್ದ ರಕ್ಷಣಾ ಖಾತೆ ಪಡೆದು ರಫೇಲ್​ನಂತಹ ವಿವಾದವನ್ನು ಸಂಸತ್ತಿನ ಒಳ- ಹೊರಗೂ ಸಮರ್ಥವಾಗಿ ಎದುರುಸಿದ್ದ ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎದುರು ಐದು ಕಠಿಣ ಸವಾಲುಗಳಿವೆ.

ಜಿಡಿಪಿಗೆ ವೇಗದ ಚಾಲನೆ

ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆ ಹಾಗೂ 6ನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇತ್ತೀಚೆಗೆ ಕೆಲವು ಆಂತರಿಕ ಮತ್ತು ಬಾಹ್ಯ ಅಂಶಗಳು ಇದಕ್ಕೆ ಸವಾಲಾಗಿದೆ. ಜನವರಿ- ಮಾರ್ಚ್​ನಲ್ಲಿ ಜಿಡಿಪಿ ಶೇ 5.8ಕ್ಕೆ ಇಳಿಕೆಯಾಗಿದೆ. ಐಎಂಎಫ್​ & ಎಡಿಬಿ ಭಾರತದ ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯನ್ನು ಕಡಿತಗೊಳಿಸಿವೆ. ಖಾಸಗಿ ಬಂಡವಾಳ ಹೂಡಿಕೆ ಮಂದಗತಿಯಲ್ಲಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ, ಚೀನಾ- ಅಮೆರಿಕ ಟ್ರೇಡ್​ ವಾರ್, ಇರಾನ್ ತೈಲ ನಿರ್ಬಂಧ ಭಾರತದ ಮೇಲೂ ಪ್ರಭಾವ ಬೀರುತ್ತಿದೆ. ಇವುಗಳನ್ನು ನಿರ್ಮಲಾ ಸೀತಾರಾಮನ್ ಅವರು ತೊಡೆದು ಹಾಕಬೇಕಿದೆ.

ಎನ್​ಪಿಎ ಎಂಬ ಮಹಾಮಾರಿ
ಸಾರ್ವಜನಿಕ ಬ್ಯಾಂಕ್​ಗಳಿಗೆ ಬೃಹತ್​ ಹೊರೆಯಾದ ₹ 8.64 ಲಕ್ಷ ಕೋಟಿ ವಸೂಲಾಗದ ಸಾಲವಿದೆ. ಇದು ಹಲವು ದಶಕಗಳ ಸಮಸ್ಯೆಯಾಗಿದ್ದು, ಬ್ಯಾಂಕ್​ಗಳ ನಗದು ಕೊರತೆಗೆ ಇದ್ದೊಂದು ಪ್ರಮುಖ ಕಾರಣವಾಗಿದೆ. ಎನ್​ಪಿಎ ತಗ್ಗಿಸುವ ಈ ಹಿಂದಿನ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸುವ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಗದು ಬಿಕ್ಕಟ್ಟು ನಿವಾರಿಸಬೇಕಿದೆ.

ಮಗ್ಗಲು ಮುಳ್ಳಾದ ನಿರುದ್ಯೋಗ
ಪ್ರತಿ ಸರ್ಕಾರವನ್ನ ಕಾಡುವ ಸಾಮಾನ್ಯ ಸಮಸ್ಯೆ ನಿರುದ್ಯೋಗ. ವಿಶ್ವ ಬ್ಯಾಂಕ್ ವರದಿ ಪ್ರಕಾರ ಭಾರತಕ್ಕೆ ವಾರ್ಷಿಕ 81 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಬೇಕು ಎಂದು ಸೂಚಿಸಿದೆ. ಇತ್ತೀಚಿನ ಅಂಕಿ -ಅಂಶಗಳ ಅನ್ವಯ, ನಿರುದ್ಯೋಗದ ಪ್ರಮಾಣ ಕಳೆದ 45 ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿ ಎಂದು ಹೇಳಿವೆ. ಇದನ್ನು ಸರ್ಕಾರವು ಒಪ್ಪಿಕೊಂಡಿದ್ದೆ. ಶೀಘ್ರವೇ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ.

ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ
ಏಷ್ಯಾ ಖಂಡದ ಬೆಳವಣಿಗೆಯ ಎಂಜಿನ್ ಸಾಗಬೇಕಾದರೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ ತನ್ನ ಕಾರ್ಯಾಚರಣೆ ಖಾಸಗಿ ವಲಯಕ್ಕೆ ವಿಸ್ತರಿಸಿ ಖಾಸಗಿ ವಲಯದ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಭಾರತದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಚ್ಚರಿಸಿದ್ದರು. ಖಾಸಗಿ ಉದ್ದಿಮೆಗಳ, ಸಾಂಸ್ಥಿಕ ಕಂಪನಿಗಳ ತಗಾದೆ, ಅಡಚಣೆಗಳನ್ನು ತೊಡೆದುಹಾಕಿ ಉದ್ಯಮ ಸ್ನೇಹಿ ನೀತಿಗಳನ್ನು ರೂಪಿಸಬೇಕಿದೆ.

ಹಣಕಾಸು ಶಿಸ್ತಿಗೆ ಆದ್ಯತೆ
ಸಾರ್ವಜನಿಕ ವೆಚ್ಚ ಏರಿಕೆಗೊಳಿಸಿ ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವತ್ತ ಹೆಚ್ಚು ಗಮನ ಕೇಂದ್ರೀಕರಸಬೇಕಿದೆ. 2018-19ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ 3.4ಕ್ಕೆ ಏರಿಕೆಯಾಗಿದ್ದು, ಇದು ಸರ್ಕಾರದ ನಿರೀಕ್ಷೆಗಿಂತ ತುಸು ಹೆಚ್ಚಾಗಿದೆ. ಈ ಎಲ್ಲ ಅಂಶಗಳಿಗಿಂತ ವಿತ್ತೀಯ ಶಿಸ್ತು ಅತಿ ಮುಖ್ಯವಾಗಿದೆ. ಇದು ಹಣದುಬ್ಬರದಂತಹ ಏರುಪೇರಿಗೆ ಮೂಲ ಕಾರಣವಾಗುತ್ತದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.