ನವದೆಹಲಿ: ಕೊರೊನಾ ಮಹಾಮಾರಿ ನಡುವೆ ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ಟಾ ಯೋಜನೆಗೆ ಚಾಲನೆ ನೀಡಿದ್ದು, ಇದರ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಇದೇ ವಿಚಾರವಾಗಿ ಕೆಕೆ ಪಾಂಡೆ ಈ ಟಿವಿ ಭಾರತ ಜೊತೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಒಂದೆಡೆ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸುವ ಕೂಗು ತೀವ್ರಗೊಳ್ಳುತ್ತಿರುವ ನಡುವೆ ನಗರ ವ್ಯವಹಾರಗಳ ತಜ್ಞ ಪ್ರೊ.ಕೆ.ಕೆ.ಪಾಂಡೆ, ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದು, ಯೋಜನೆ ಮುಂದುವರಿಸಬೇಕೆಂದು ಸಲಹೆ ನೀಡಿದ್ದಾರೆ.
ಈಟಿವಿ ಭಾರತ ಜೊತೆ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಸೆಂಟರ್ ಫಾರ್ ಅರ್ಬನ್ ಸ್ಟಡೀಸ್ನ ಪ್ರಾಧ್ಯಾಪಕ (ನಗರ ನಿರ್ವಹಣೆ) ಮತ್ತು ಸಂಯೋಜಕ ಕೆ.ಕೆ.ಪಾಂಡೆ, ಈ ಯೋಜನೆ ಸ್ಥಗಿತಗೊಳಿಸುವುದರಲ್ಲಿ ಅಥವಾ ಸೆಂಟ್ರಲ್ ವಿಸ್ಟಾಗೆ ಮೀಸಲಿಟ್ಟ ಹಣವನ್ನು COVID- 19 ವಿರುದ್ಧ ಬಳಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹಲವಾರು ಇತರ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸರ್ಕಾರವು ಈಗಾಗಲೇ ಲಸಿಕೆಗಾಗಿ ದೊಡ್ಡ ಮೊತ್ತವನ್ನು ವಿನಿಯೋಗಿಸಿದೆ. ವಾಸ್ತವವಾಗಿ, ನಡೆಯುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಕಳೆದ ಬಜೆಟ್‌ನಲ್ಲಿ ವ್ಯಾಕ್ಸಿನೇಷನ್ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ 35,000 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಘೋಷಿಸಿತ್ತು. ಹಾಗೆ ಶುಕ್ರವಾರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ಸೆಂಟ್ರಲ್ ವಿಸ್ಟಾದ ವೆಚ್ಚ ಸುಮಾರು 20,000 ಕೋಟಿ ರೂ. ಮತ್ತು ಇದನ್ನು ಹಲವಾರು ವರ್ಷಗಳಲ್ಲಿ ಖರ್ಚು ಮಾಡಲಾಗುವುದು ಎಂದು ಹೇಳಿದ್ದರು. ಭಾರತ ಸರ್ಕಾರವು ವ್ಯಾಕ್ಸಿನೇಷನ್ಗಾಗಿ ಸುಮಾರು ಎರಡು ಪಟ್ಟು ಹಣವನ್ನು ಮೀಸಲಿಟ್ಟಿದೆ. ಜೊತೆಗೆ ಈ ವರ್ಷದ ಭಾರತದ ಆರೋಗ್ಯ ಬಜೆಟ್ 3 ಲಕ್ಷ ಕೋಟಿ ರೂ. ಎಂದು ತಿಳಿಸಿದರು.
ಸೆಂಟ್ರಲ್ ವಿಸ್ಟಾ ಯೋಜನೆಯು ಮುಂದಿನ ಕೆಲವು ವರ್ಷಗಳಲ್ಲಿ ಕೈಗೆತ್ತಿಕೊಳ್ಳುವ ಹಲವಾರು ಘಟಕಗಳನ್ನು ರೂಪಿಸಿದೆ. ಹೊಸ ಸಂಸತ್ತಿನ ಕಟ್ಟಡ ಮತ್ತು ಸೆಂಟ್ರಲ್ ವಿಸ್ಟಾ ಕೆಲಸಗಳಿಗೆ ಕ್ರಮವಾಗಿ 862 ಕೋಟಿ ರೂ. ಮತ್ತು 477 ಕೋಟಿ ರೂ. ಅಂದಾಜು ವೆಚ್ಚ ಎಂದು ತಿಳಿಸಿದರು.
ನವೀಕರಿಸಿದ ಹುಲ್ಲುಹಾಸುಗಳು, ರಾಜಪಥದ ಉದ್ದಕ್ಕೂ ಸುಸಜ್ಜಿತವಾದ ಕಾಲುದಾರಿಗಳು, ಸುಧಾರಿತ ಭೂದೃಶ್ಯ, ಸ್ವಚ್ಛ ಕಾಲುವೆಗಳು, ಸಾಕಷ್ಟು ಸಾರ್ವಜನಿಕ ಸೌಕರ್ಯಗಳು, ವಿತರಣಾ ಪ್ರದೇಶಗಳು, ಸಾರ್ವಜನಿಕ ಕಾರ್ಯಕ್ಷಮತೆ ಸೌಲಭ್ಯಗಳು, ಸುರಕ್ಷಿತ ರಸ್ತೆ ದಾಟುವಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಲವಾರು ಸೌಲಭ್ಯಗಳು ಕೇಂದ್ರ ವಿಸ್ಟಾ ಯೋಜನೆಯಡಿ ಸೇರಿವೆ. ಹೊಸ ಸಂಸತ್ತಿನ ಕಟ್ಟಡದ ಹೊರತಾಗಿ, ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಕೆಲಸವನ್ನೂ ಮಾಡಲಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ಗೆ 3 ಕಿ.ಮೀ.ನ ರಾಜಪಥನವೀಕರಿಸುವುದು, ಪ್ರಧಾನ ಮಂತ್ರಿಗೆ ಹೊಸ ನಿವಾಸ, ಹೊಸ ಪ್ರಧಾನ ಮಂತ್ರಿ ಕಚೇರಿ ಮತ್ತು ಉಪಾಧ್ಯಕ್ಷರ ಕಚೇರಿ. ಹೊಸ ಸಂಸತ್ತಿನ ಕಟ್ಟಡ ದಲ್ಲಿ ದೊಡ್ಡ ಲೋಕಸಭೆ ಮತ್ತು ರಾಜ್ಯಸಭಾ ಸಭಾಂಗಣಗಳನ್ನು ಈ ವಿಸ್ಟಾ ಯೋಜನೆ ಹೊಂದಿದೆ. ಈ ಯೋಜನೆಯು ಭಾರತೀಯ ಸ್ವಾತಂತ್ರ್ಯದ 75 ನೇ ಗಣರಾಜ್ಯೋತ್ಸವದ ಸಮಯಕ್ಕೆ ಸಿದ್ಧವಾಗುತ್ತದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಸಿಪಿಎಂ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ನಂತರ ಪುರಿ ಈ ಹೇಳಿಕೆ ನೀಡಿದ್ದಾರೆ. ಮೆಗಾ ಯೋಜನೆಗೆ ಮೀಸಲಿಟ್ಟ ಹಣವನ್ನು ಜನರಿಗೆ ಲಸಿಕೆ ನೀಡುವುದಕ್ಕೆ ವಿನಿಯೋಗಿಸಬೇಕೆಂದು ಯೆಚೂರಿ ಗುರುವಾರ ಒತ್ತಾಯಿಸಿದ್ದರು. ಹಾಗೆ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಸೆಂಟ್ರಲ್ ವಿಸ್ಟಾ ಯೋಜನೆಯಡಿ ಪುನರಾಭಿವೃದ್ಧಿ ಕಾರ್ಯವನ್ನು ಶಪೂರ್ಜಿ ಪಲ್ಲೊಂಜಿ ಮತ್ತು ಕಂಪನಿ ಪ್ರೈವೇಟ್ ಲಿಮಿಟೆಡ್‌ಗೆ 477 ಕೋಟಿ ರೂ.ಗಳ ವೆಚ್ಚದಲ್ಲಿ ನೀಡಲಾಗಿದ್ದು, ಹೊಸ ಸಂಸತ್ತಿನ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ 862 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿದೆ.
ಈ ಕೆಲಸವನ್ನು ಈಗಾಗಲೇ ನಿರ್ಮಾಣ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಚಾಲ್ತಿಯಲ್ಲಿರುವ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ಕೆಲಸವನ್ನು ಸ್ಥಗಿತಗೊಳಿಸಿದರೆ, ಕೆಲಸ ಪುನರಾರಂಭವಾದಾಗ ಅದರ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಅದು ಸಾಮಾನ್ಯ ತೆರಿಗೆದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಂಡೆ ಅಭಿಪ್ರಾಯಟ್ಟಿದ್ದಾರೆ. ವಿಸ್ಟಾ ಯೋಜನೆ ಕಳೆದ ವರ್ಷ ಡಿಸೆಂಬರ್ 10 ರಂದು ಪ್ರಾರಂಭವಾಯಿತು. ಈಗಾಗಲೇ ಈ ಯೋಜನೆಗೆ ಚಾಲನೆ ಸಹ ನೀಡಲಾಗಿದೆ. ಇದಕ್ಕೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.