ETV Bharat / briefs

ಲಂಚ ಪ್ರಕರಣ : ಅನಿಲ್ ದೇಶ್​ಮುಖ್​ ವಶಕ್ಕೆ ಪಡೆದು ಸಿಬಿಐ ಡ್ರಿಲ್, ತೀವ್ರ ಶೋಧ - Maharashtra HM Anil Deshmukh

ಮಾರ್ಚ್ 25 ರಂದು ಪರಮ ಬಿರ್​ ಸಿಂಗ್ ಅವರು ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕ್ರಿಮಿನಲ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು..

Anil Deshmukh
Anil Deshmukh
author img

By

Published : Apr 24, 2021, 3:22 PM IST

Updated : Apr 24, 2021, 4:32 PM IST

ಮಹಾರಾಷ್ಟ್ರ : ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್​ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ಮುಂದುರಿಸಿದೆ. ವಶಕ್ಕೂ ಮುನ್ನ ಸಿಬಿಐ ದೇಶ್​ಮುಖ್​ಗೆ ಸಂಬಂಧಪಟ್ಟ ಮುಂಬೈನ ವಿವಿಧ ಸ್ಥಳಗಳಲ್ಲಿ ಸಿಬಿಐ ಮೊಕ್ಕಾಂ ಹೂಡಿ, ತೀವ್ರ ಶೋಧ ನಡೆಸಿತ್ತು.

Anil Deshmukh
ಅನಿಲ್ ದೇಶ್​ಮುಖ್​

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್‌ಸಿಂಗ್ ಅವರ ಆರೋಪಗಳನ್ನು ಪರಿಶೀಲಿಸುವಂತೆ ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ ತನಿಖಾ ಸಂಸ್ಥೆ ಪ್ರಾಥಮಿಕ ತನಿಖೆ ನಡೆಸಿದೆ.

ವಿಚಾರಣೆಯ ಸಮಯದಲ್ಲಿ ಸಿಬಿಐ, ದೇಶಮುಖ್ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನಿಯಮಿತವಾಗಿ ಪ್ರಕರಣ ದಾಖಲಿಸಿದೆ.

ಈ ಮೂಲಕ ಔಪಚಾರಿಕ ತನಿಖೆ ಪ್ರಾರಂಭಿಸಲು ಸಾಕಷ್ಟು ಪ್ರಾಥಮಿಕ ದಾಖಲೆಗಳನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿದ ನಂತರದಲ್ಲಿ ಸಿಬಿಐ ಮುಂಬೈನ ಹಲವಾರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಇದೀಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಮಾರ್ಚ್ 25ರಂದು ಪರಮ ಬಿರ್‌ಸಿಂಗ್ ಅವರು ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕ್ರಿಮಿನಲ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು.

ಅವರು ಅಮಾನತುಗೊಂಡ ಕಾಪ್ ಸಚಿನ್ ವಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಪಡೆದ 100 ಕೋಟಿ ರೂ.ಗಳನ್ನು ನೀಡುವಂತೆ ಕೇಳಿದ್ದರು.

ದೇಶ್​ಮುಖ್ ಅವರ ಭ್ರಷ್ಟ ದುಷ್ಕೃತ್ಯಗಳ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಇತರ ಹಿರಿಯ ಮುಖಂಡರಿಗೆ ದೂರು ನೀಡಿದ ಬಳಿಕ ಅವರನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾಯಿಸಲಾಯಿತು ಎಂದು ಆರೋಪಿಸಿ ಸಿಂಗ್ ಆರಂಭದಲ್ಲಿ ಸುಪ್ರೀಂಕೋರ್ಟ್‌ನ ಸಂಪರ್ಕಿಸಿದ್ದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಸಿಂಗ್ ಅವರನ್ನು ಹೈಕೋರ್ಟ್ ಸಂಪರ್ಕಿಸುವಂತೆ ಕೇಳಿಕೊಂಡಿದೆ.

Last Updated : Apr 24, 2021, 4:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.