ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಗಲಾಟೆ ಹಿಂಸಾಚಾರ, ಮಮತಾ ಬ್ಯಾನರ್ಜಿ ಪ್ರತಿಷ್ಠೆ, ಮೋದಿ ಅಬ್ಬರದಿಂದ ದೀದಿ ನಾಡು ಚುನಾವಣೆಯ ಕೇಂದ್ರ ಬಿಂದುವಾಗಿತ್ತು.
ಆರಂಭಿಕ ಎರಡು ಗಂಟೆಗಳ ಬಳಿಕದ ಟ್ರೆಂಡ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ 14 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ. ದೀದಿ ಪಕ್ಷ ಟಿಎಂಸಿ 26 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ ಎರಡು ಕ್ಷೇತ್ರದಲ್ಲಿ ಜಯ ಸಾಧಿಸಿದ್ದ ಬಿಜೆಪಿ ಈ ಬಾರಿ ದೊಡ್ಡ ಮಟ್ಟದಲ್ಲಿ ಜಯಗಳಿಸಲು ಪಣತೊಟ್ಟಿತ್ತು. ಹೀಗಾಗಿ ಮಮತಾ ಬ್ಯಾನರ್ಜಿ ತಮ್ಮ ಪ್ರತಿಷ್ಠೆ ಉಳಿಸಲು ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಮೋದಿ ಹವಾ ಈ ಬಾರಿ ದೀದಿ ನಾಡನ್ನು ಬಹುತೇಕ ಆವರಿಸಿದಂತೆ ಆರಂಭಿಕ ಟ್ರೆಂಡ್ ಸೂಚಿಸುತ್ತಿದೆ.
ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 15 ಅಥವಾ ಅದಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದರೆ ಅದು ಬೃಹತ್ ಗೆಲುವಾಗಲಿದೆ. ಪ್ರಧಾನಿ ಪಟ್ಟದ ಡಾರ್ಕ್ ಹಾರ್ಸ್ ಎಂದೇ ಬಿಂಬಿತವಾಗಿರುವ ಮಮತಾ ಬ್ಯಾನರ್ಜಿಗೆ ಈ ರಿಸಲ್ಟ್ ದೊಡ್ಡ ಮುಖಭಂಗವಾಗೋದಂತು ಸತ್ಯ..!