ಮಂಡ್ಯ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕೇರಳದ ನಾಲ್ಕು ಮಂದಿ ಸಾವಿಗೀಡಾದ ಘಟನೆ ಮದ್ದೂರಿನ ಕೊಪ್ಪ ವೃತ್ತದ ಬಳಿ ಮಧ್ಯರಾತ್ರಿ ನಡೆದಿದೆ.
![mandya](https://etvbharatimages.akamaized.net/etvbharat/prod-images/kn-mnd-01-24-accident-7202530_24052019081245_2405f_1558665765_660.jpg)
ನಿಂತಿದ್ದ ಲಾರಿಗೆ ಡಿಕ್ಕಿ ಹೊಡದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
![mandya](https://etvbharatimages.akamaized.net/etvbharat/prod-images/kn-mnd-01-24-accident-7202530_24052019081245_2405f_1558665765_720.jpg)
ಕೇರಳದ ಕಣ್ಣೂರು ಮೂಲದ ದಂಪತಿಗಳಾದ ಜಯದೀಪ್ ಹಾಗೂ ಪತ್ನಿ ಗ್ಯಾನತೀರ್ಥ, ಕಿರಣ್ ಹಾಗೂ ಪತ್ನಿ ಜಾನ್ಸಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.