ಬೆಂಗಳೂರು: ಭಾರತದ ಪುರಾತನ ಹಾಗೂ ಸದ್ಯ ಬಳಕೆಯಿಂದ ಬಹುತೇಕ ಮಾಯವಾಗಿರುವ ಸಂಸ್ಕೃತ ಭಾಷೆಯನ್ನು ಸಿಲಿಕಾನ್ ಸಿಟಿಯ ಕ್ಯಾಬ್ ಡ್ರೈವರ್ ನಿರರ್ಗಳವಾಗಿ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
45 ಸೆಕೆಂಡಿನ ವಿಡಿಯೋದಲ್ಲಿ ಪ್ರಯಾಣಿಕ ಸಂಸ್ಕೃತದಲ್ಲಿ ಕೇಳುವ ಎಲ್ಲ ಪ್ರಶ್ನೆಗೆ ಕ್ಯಾಬ್ ಚಾಲಕ ಯಾವುದೇ ತಪ್ಪಿಲ್ಲದೆ ಸ್ಪಷ್ಟವಾಗಿ ಉತ್ತರಿಸುತ್ತಾನೆ. ಪ್ರಯಾಣಿಕ ಹಾಗೂ ಚಾಲಕನ ಈ ಚುಟುಕು ಸಂಭಾಷಣೆ ಸದ್ಯ ಟ್ವಿಟರ್ನಲ್ಲಿ ವೈರಲ್ ಆಗಿದೆ.
-
Sanskrit speaking cab driver in Bengaluru🙏🏻 pic.twitter.com/2Kc5tRrnzU
— Girish Bharadwaja (@Girishvhp) June 11, 2019 " class="align-text-top noRightClick twitterSection" data="
">Sanskrit speaking cab driver in Bengaluru🙏🏻 pic.twitter.com/2Kc5tRrnzU
— Girish Bharadwaja (@Girishvhp) June 11, 2019Sanskrit speaking cab driver in Bengaluru🙏🏻 pic.twitter.com/2Kc5tRrnzU
— Girish Bharadwaja (@Girishvhp) June 11, 2019
ಗಿರೀಶ್ ಭಾರಾಧ್ವಾಜ್ ಹೆಸರಿನ ಉದ್ಯಮಿ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಸದ್ಯ ಈ ವಿಡಿಯೋವನ್ನು ಸುಮಾರು ಮೂರು ಸಾವಿರ ಮಂದಿ ರಿಟ್ವೀಟ್ ಮಾಡಿದ್ದು ಏಳು ಸಾವಿರಕ್ಕೂ ಅಧಿಕ ಮೆಚ್ಚುಗೆ ಪಡೆದಿದೆ. ಕಾಮೆಂಟ್ನಲ್ಲಿ ಎಲ್ಲರೂ ಚಾಲಕನ ಸಂಸ್ಕೃತ ಭಾಷಾ ಪ್ರೀತಿ ಹಾಗೂ ನಿರರ್ಗಳತೆ ಕೊಂಡಾಡಿದ್ದಾರೆ.