ಬೆಳಗಾವಿ: ರಾಜ್ಯದ ಅತಿ ದೊಡ್ಡ ಜಿಲ್ಲೆ ಹಾಗೂ ಪ್ರಮುಖ ನಗರಗಳಲ್ಲಿವೊಂದಾಗಿರುವ ಬೆಳಗಾವಿ ರಾಜಕಾರಣ ಯಾವಾಗಲೂ ಗಮನ ಸಳೆಯುತ್ತಲೇ ಇರುತ್ತದೆ. ಕಲೆ, ಧಾರ್ಮಿಕ, ಸಾಹಿತ್ಯ ಹಾಗೂ ಶೈಕ್ಷಣಿಕ ವಿಚಾರಕ್ಕೆ ಬಂದ್ರೆ ಇಲ್ಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಸ್ಥಳಗಳು ಸಿಗುತ್ತವೆ. ಜೈನ ದೇವಾಲಯ, ಕಪಿಲೇಶ್ವರ ದೇವಸ್ಥಾನ, ಕಮಲ ಬಸ್ತಿ, ಮಹದೇವ ದೇವಸ್ಥಾನ ಹಾಗೂ ಪಾರ್ಕ್ ಹೀಗೆ ಎಲ್ಲಾ ಸಮುದಾಯಕ್ಕೂ ಬೇಕಿರುವ ಆಲಯಗಳು ಇಲ್ಲಿದ್ದು, ಜನರ ಕಣ್ಮನ ಸೆಳೆಯುತ್ತದೆ.
ಬೆಳಗಾವಿಯಲ್ಲಿ ಸಾಹುಕಾರರದ್ದೇ ರಾಜಕೀಯ ದರ್ಬಾರು:
ಬೆಳಗಾವಿ ಸಾಹುಕಾರರು ಅಂತಲೇ ಕರಿಸಿಕೊಳ್ಳುವ ಜಾರಕಿಹೊಳಿ ಸಹೋದರರದ್ದೇ ಇಲ್ಲಿ ರಾಜಕೀಯ ಮೇಲುಗೈ ಸಾಧಿಸಿದ್ದಾರೆ. ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಒಟ್ಟು ನಾಲ್ವರು ಅಣ್ಣತಮ್ಮಂದಿರ ಪೈಕಿ ಲಖನ್ ಜಾರಕಿಹೊಳಿ ಅಷ್ಟಾಗಿ ರಾಜಕೀಯದಲ್ಲಿ ಕಾಣಿಸಿಕೊಂಡಿಲ್ಲ. ಇಲ್ಲಿನ ರೈತರ ಬಗ್ಗೆ ಹೋಳೋದಾದ್ರೆ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಅನ್ನದಾತರಿಗೆ ಕೊಡಬೇಕಿರುವ ಕಬ್ಬಿನ ಬಾಕಿ ಬಿಲ್‌ಗಳು ಸಾವಿರಾರು ಕೋಟಿ ಲೆಕ್ಕದಲ್ಲಿವೆ. ಬಹುತೇಕ ಸರ್ಕರೆ ಕಾರ್ಖಾನೆಗಳು ರಾಜಕೀಯ ಮುಖಂಡರಿಗೆ ಸೇರಿರೋದು ಮತ್ತೊಂದು ದುರಂ. ಅದೆಷ್ಟೋ ಸಂದರ್ಭಗಳಲ್ಲಿ ರೈತರು ಬೀದಿಗಿಳಿದು ಹೋರಾಟಗಳನ್ನ ಮಾಡಿರೋ ನಿದರ್ಶನಗಲು ಸಿಗುತ್ತವೆ.
ಎಂಇಎಸ್ ತಂತ್ರ ಯಾರಿಗೆ ಲಾಭ..?
ಬೆಳಗಾವಿ ಲೋಕಸಭೆ ಕ್ಷೇತ್ರದ ಕಣದಲ್ಲಿ ಒಟ್ಟು 57 ಅಭ್ಯರ್ಥಿಗಳಿದ್ದರು. ಆ ಪೈಕಿ 49 ಅಭ್ಯರ್ಥಿಗಳು ಎಂಇಎಸ್ ಬೆಂಬಲಿತರು. ಗಡಿ ವಿವಾದ ಸುಪ್ರೀಂ ಕೋರ್ಟ್‍ನಲ್ಲಿದ್ದು, ದೇಶದ ಗಮನ ಸೆಳೆಯಲೆಂದೇ ಈ ಚುನಾವಣೆಯಲ್ಲಿ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಂಇಎಸ್ ನಿರ್ಧರಿಸಿತ್ತು. ಆದರೆ ಠೇವಣಿ ಪಾವತಿಸಲು ಹಣ ಇಲ್ಲದ ಕಾರಣ ಅಂತಿಮವಾಗಿ 49 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಮೊದಲಿನಿಂದ ಮರಾಠಿ ಭಾಷಿಕ ಮತಗಳು ಬಿಜೆಪಿ ಪರವಾಗಿಯೇ ಇದ್ದವು. ಆದರೆ ಈ ಸಲ ಎಂಇಎಸ್ ಅಭ್ಯರ್ಥಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಬಿದ್ದಿಲ್ಲ ಎನ್ನಲಾಗಿದೆ.
ಬೆಳಗಾವಿಯಲ್ಲಿ ಶೇಕಡಾ 67.44 ರಷ್ಟು ಮತದಾನ
ಜಿಲ್ಲೆಯಲ್ಲಿ ಒಟ್ಟು 17,71, 829 ಮತದಾರರು ಇದ್ದು, ಅದರಲ್ಲಿ 11, 94, 909 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂದರೆ ಈ ಬಾರಿ ಶೇಕಡಾ 66.59 ರಷ್ಟು ಮತದಾನವಾಗಿದೆ. ಆರು ಲಕ್ಷ 23 ಸಾವಿರದ 3 ಮಂದಿ ಪುರುಷರು ಹಾಗೂ 5 ಲಕ್ಷ 71 ಸಾವಿರದ 898 ಮಹಿಳೆಯರು ಹಾಗೂ 8 ಮಂದಿ ಇತರರು ವೋಟ್ ಮಾಡಿದ್ದಾರೆ. ಒಟ್ಟಾರೆ, ಸಂಸತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹದಿನೇಳನೇ ಪಾರ್ಲಿಮೆಂಟ್ ಆಯ್ಕೆಯಾಗಲಿರುವ ಅಭ್ಯರ್ಥಿ ಇಲ್ಲಿನ ಜನಸಾಮಾನ್ಯರು ಹಾಗೂ ಅನ್ನದಾತರ ಸಮಸ್ಯೆಗಳಿಗೆ ಧ್ವನಿಗೂಡಿಸಬೇಕಿದೆ.