ETV Bharat / briefs

ಬಿಬಿಎಂಪಿ ಉಪಚುನಾವಣೆಗೆ ಮತದಾನ ಅಂತ್ಯ : ಮೇ 31ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ - undefined

ಇಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಬಿಬಿಎಂಪಿ ಉಪ ಚುನಾವಣೆಗೆ ಮತದಾನ ನಡೆಯಿತು. ಮೇ 31ನೇ ಶುಕ್ರವಾರದಂದು  ಮತ ಎಣಿಕೆ ನಡೆಯಲಿದ್ದು, ಹತ್ತು ಗಂಟೆಯೊಳಗೆ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.

ಬಿಬಿಎಂಪಿ ಚುನಾವಣೆ
author img

By

Published : May 29, 2019, 8:39 PM IST

ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್ ಗಳಿಗೆ ನಡೆದ ಉಪಚುನಾವಣೆ ಮುಕ್ತಾಯಗೊಂಡಿದೆ. ಸಗಾಯಪುರಂ, ಕಾವೇರಿಪುರ ವಾರ್ಡ್​ಗಳಲ್ಲಿ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿತ್ತು. ಸಗಾಯಪುರಂನಲ್ಲಿ ಶಾಂತಿಯುತವಾಗಿ ಮತದಾನ ನಡೆದರೆ, ಕಾವೇರಿಪುರದಲ್ಲಿ ಮೈತ್ರಿ ಪಕ್ಷ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಮೇ 31ರಂದು ಇಂದು ನಡೆದ ಮತದಾನದ ಫಲಿತಾಂಶ ಹೊರ ಬೀಳಲಿದೆ.

ಬಿಬಿಎಂಪಿ ಚುನಾವಣೆ

ಪಾಲಿಕೆ ಸದಸ್ಯ ಏಳುಮಲೈ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆ ಇದಾಗಿದ್ದು, ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ ಹಾಗೂ ಸ್ವತಂತ್ರ ಅಭ್ಯರ್ಥಿ ಮಾರಿಮುತ್ತು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಪಚುನಾವಣೆಯಲ್ಲಿ ಶೇಕಡಾ 44.71 ರಷ್ಟು ಮತದಾನವಾಗಿದೆ.

ಕಾವೇರಿಪುರ ವಾರ್ಡ್​ ಉಪಚುನಾವಣೆ: ಇನ್ನು ಕಾವೇರಿಪುರ ವಾರ್ಡ್​ನಲ್ಲಿ ಕಾರ್ಯಕರ್ತರು ದೊಣ್ಣೆ ಹಿಡಿದು ರಸ್ತೆಯಲ್ಲೇ ಬಡೆದಾಡಿಕೊಂಡರು. ಬಿಜೆಪಿ ಹಾಗೂ ಮೈತ್ರಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸೋ ಹಂತಕ್ಕೂ ತಲುಪಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎರಡು ಪಕ್ಷದವರೂ ಕೂಡ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರೆ.

ಕಾವೇರಿಪುರದಲ್ಲಿ ನಡೆದಂತಹ ಉಪಚುನಾವಣೆಯಲ್ಲಿ ಕಾವೇರಿಪುರದಲ್ಲಿ ಶೇಕಡ 39. 54 ರಷ್ಟು ಮತದಾನವಾಗಿದ್ದು, ರಜೆ ಇರದ ಕಾರಣ ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Intro:ಮತಗಟ್ಟೆ ಗೇಟ್ ಕ್ಲೋಸ್ ಮಾಡಿದ ಸಿಬ್ಬಂದಿ- ಅಭ್ಯರ್ಥಿಗಳ ಭವಿಷ್ಯ ಇವಿಎಂ ನಲ್ಲಿ ಭದ್ರ

ಬೆಂಗಳೂರು-ಬಿಬಿಎಂಪಿಯ ಎರಡು ವಾರ್ಡ್ ಗಳಿಗೆ ನಡೆದ ಉಪಚುನಾವಣೆ ಮುಕ್ತಾಯಗೊಂಡಿದೆ. ಸಗಾಯಪುರಂ ವಾರ್ಡ್ ನಲ್ಲಿ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿದ್ದ ಮತದಾನ ಶಾಂತಿಯುತವಾಗಿ ನಡೆಯಿತು. ಐದು ಗಂಟೆ ವೇಳೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು, ಬಳಿಕ ಸಿಬ್ಬಂದಿಗಳು ಮತಗಟ್ಟೆಯ ಗೇಟ್ ಬಂದ್ ಮಾಡಿದರು. ತಡವಾಗಿ ಬಂದ ಕೆಲವರು ಮತದಾನದಿಂದ ವಂಚಿತರಾಗಿದ್ದಾರೆ. ಚುನಾವಣಾ ಸಿಬ್ಬಂದಿಗಳು ಇವಿಎಂ ಮೆಷಿನ್ ಗಳನ್ನು ಪ್ಯಾಕ್ ಮಾಡುತ್ತಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ನಲ್ಲಿ ಭದ್ರವಾಗಿದೆ. ಶುಕ್ರವಾರ 31 ನೇ ತಾರೀಕಿನಂದು ಮತ ಎಣಿಕೆ ನಡೆಯಲಿದ್ದು, ಹತ್ತು ಗಂಟೆಯೊಳಗೆ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.
ಪಾಲಿಕೆ ಸದಸ್ಯ ಏಳುಮಲೈ ನಿಧನದ ಹಿನ್ನಲೆ ನಡೆದ ಉಪಚುನಾವಣೆ ಇದಾಗಿದ್ದು, ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ ಹಾಗೂ ಸ್ವತಂತ್ರ ಅಭ್ಯರ್ಥಿ ಮಾರಿಮುತ್ತು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಜೆಯರೀಮ್ ಕೂಡಾ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದ್ದರು.
ಮಧ್ಯಾಹ್ನದ ಬಳಿಕ ವಾರ್ಡ್ ನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಟ್ಟು 31, 928 ಮತದಾರರಿದ್ದು, ಈ ವಾರ್ಡ್ ನಲ್ಲಿ ಶೇಕಡಾ 44.71 ರಷ್ಟು ಮತದಾನವಾಗಿದೆ. ಆದ್ರೆ ಪೊಲೀಸರ ಸೂಕ್ತ ಭದ್ರತೆಯಿಂದಾಗಿ ಮತದಾನ ಶಾಂತಿಯುತವಾಗಿ ನಡೆಯುವಲ್ಲಿ ಯಶಸ್ವಿಯಾಯಿತು. ತಡವಾಗಿ ಬಂದ ಕೆಲವರಿಗೆ ಮತ ಚಲಾವಣೆ ಮಾಡಲು ಅವಕಾಶ ಸಿಕ್ಕಿಲ್ಲ.

ಸೌಮ್ಯಶ್ರೀ
KN_BNG_03_29_bbm_Sagayapuram_script_sowmya_7202707

Body:..Conclusion:...

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.