ಢಾಕಾ: ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ಬಾಂಗ್ಲಾದೇಶ ತಂಡ ಪ್ರಕಟಗೊಂಡಿದ್ದು, 15 ಸದಸ್ಯರನ್ನೊಳಗೊಂಡ ತಂಡವನ್ನ ಮಶ್ರಾಫೆ ಮೊರ್ತಝಾ ಮುನ್ನಡೆಸಲಿದ್ದಾರೆ.
ಉಪನಾಯಕನಾಗಿ ಶಕೀಬ್ ಅಲ್ ಹಸನ್ ಸಾಥ್ ನೀಡಲಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮೊಸಡೆಕ್ ಹುಸೇನ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ವಿಶೇಷ ಎಂದರೆ ಇನ್ನು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡದೇ ವೇಗದ ಬೌಲರ್ ಅಬು ಜಯದ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈತ ಕಳೆದ ತಿಂಗಳ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು.
-
BREAKING: Bangladesh have named their 15-man squad for #CWC19! pic.twitter.com/o5qnwWdh7S
— Cricket World Cup (@cricketworldcup) April 16, 2019 " class="align-text-top noRightClick twitterSection" data="
">BREAKING: Bangladesh have named their 15-man squad for #CWC19! pic.twitter.com/o5qnwWdh7S
— Cricket World Cup (@cricketworldcup) April 16, 2019BREAKING: Bangladesh have named their 15-man squad for #CWC19! pic.twitter.com/o5qnwWdh7S
— Cricket World Cup (@cricketworldcup) April 16, 2019
ದಕ್ಷಿಣ ಆಫ್ರಿಕಾದೊಂದಿಗೆ ಜೂನ್ 2ರಂದು ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯಗಳಲ್ಲಿ ಬಾಂಗ್ಲಾದೇಶ ಭಾಗಿಯಾಗಲಿದೆ. ಈಗಾಗಲೇ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಹಾಗೂ ಭಾರತ ತನ್ನ ತಂಡ ಪ್ರಕಟಗೊಳಿಸಿದೆ.
ತಂಡ ಇಂತಿದೆ: ಮಶ್ರಾಫೆ ಮೊರ್ತಝಾ (ಕ್ಯಾಪ್ಟನ್), ತಮೀಮ್ ಇಕ್ಬಾಲ್, ಮಹಮ್ಮದುಲ್ಲಾ, ಮುಷ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ಉಪ ನಾಯಕ), ಸೌಮ್ಯ ಸರ್ಕಾರ್, ಲಿಟಾನ್ ದಾಸ್, ಸಬ್ಬೀರ್ ರಹಮಾನ್, ಮೆಹಿದ್ ಹಸನ್, ಮೊಹಮ್ಮದ್ ಮಿಥುನ್, ರುಬೆಲ್ ಹುಸೇನ್, ಮುಸ್ತಾಫಿಜರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್,ಮೊಸಡೆಕ್ ಹುಸೇನ್, ಅಬು ಜಯದ್.