ETV Bharat / briefs

ಗಬ್ಬೆದ್ದು ನಾರುತ್ತಿದೆ ಬನಹಟ್ಟಿ ನೀರು ಶುದ್ಧೀಕರಣ ಘಟಕ : ಸ್ವಚ್ಛತೆಗೆ ಆಗ್ರಹ - water

ಕೃಷ್ಣಾ ನದಿಯಿಂದ ಲಕ್ಷಾಂತರ ಲೀಟರ್​​ ನೀರು ನಿತ್ಯ ಈ ಘಟಕಕ್ಕೆ ಬಂದು ಸಂಗ್ರಹವಾಗುತ್ತದೆ. ಆದರೆ ಕಳೆದ ಹಲವಾರು ದಿನಗಳಿಂದ ನದಿ ಸಂಪೂರ್ಣ ಬತ್ತಿದ್ದರಿಂದ ಘಟಕದ ಎಲ್ಲ ಹೊಂಡಗಳು ಸಂಪೂರ್ಣ ಒಣಗಿವೆ. ಇಲ್ಲಿಯ ಎಲ್ಲ ಹೊಂಡಗಳಲ್ಲಿ ಟನ್‍ಗಟ್ಟಲೇ ಮಣ್ಣು ಬಿದ್ದು ಖಾಲಿಯಾದ ಕೆರೆಕಟ್ಟೆಗಳು ಒಣಗಿದ ಹಾಗೆ ಮಣ್ಣಿನ ಬಿರುಕುಗಳು ಕಾಣುತ್ತಿವೆ. ಅಲ್ಲದೆ ಅಳಿದುಳಿದ ನೀರಿನಲ್ಲಿ ಹುಳುಗಳಾಗಿ ಗಬ್ಬೆದ್ದು ನಾರುತ್ತಿದೆ.

ನೀರು ಶುದ್ಧೀಕರಣ ಘಟಕ
author img

By

Published : Apr 28, 2019, 4:49 AM IST

ಬಾಗಲಕೋಟೆ: ಲಕ್ಷಾಂತರ ಜನರಿಗೆ ಇಲ್ಲಿಯ ಹಳೆ ನೀರಿನ ಟ್ಯಾಂಕಿಗೆ ಹತ್ತಿರವಿರುವ ನೀರು ಶುದ್ಧೀಕರಣ ಘಟಕದಿಂದಲೇ ಬನಹಟ್ಟಿ ಜನರಿಗೆ ರಬಕವಿ-ಬನಹಟ್ಟಿ ನಗರಸಭೆ ಕುಡಿವ ನೀರು ಸರಬರಾಜು ಮಾಡುತ್ತದೆ. ಆದರೆ ಹಲವಾರು ವರ್ಷಗಳಿಂದ ಇಲ್ಲಿನ ಶುದ್ಧ ಕುಡಿಯುವ ನೀರು ಪೂರೈಸುವ ಶುಧ್ದೀಕರಣ ಘಟಕ ಗಬ್ಬೆದ್ದು ನಾರುತ್ತಿದೆ.

ಕೃಷ್ಣಾ ನದಿಯಿಂದ ಲಕ್ಷಾಂತರ ಲೀಟರ್​​ ನೀರು ನಿತ್ಯ ಈ ಘಟಕಕ್ಕೆ ಬಂದು ಸಂಗ್ರಹವಾಗುತ್ತದೆ. ಆದರೆ ಕಳೆದ ಹಲವಾರು ದಿನಗಳಿಂದ ನದಿ ಸಂಪೂರ್ಣ ಬತ್ತಿದ್ದರಿಂದ ಘಟಕದ ಎಲ್ಲ ಹೊಂಡಗಳು ಸಂಪೂರ್ಣ ಒಣಗಿವೆ. ಇಲ್ಲಿಯ ಎಲ್ಲ ಹೊಂಡಗಳಲ್ಲಿ ಟನ್‍ಗಟ್ಟಲೇ ಮಣ್ಣು ಬಿದ್ದು ಖಾಲಿಯಾದ ಕೆರೆಕಟ್ಟೆಗಳು ಒಣಗಿದ ಹಾಗೆ ಮಣ್ಣಿನ ಬಿರುಕುಗಳು ಕಾಣುತ್ತಿವೆ. ಅಲ್ಲದೆ ಅಳಿದುಳಿದ ನೀರಿನಲ್ಲಿ ಹುಳುಗಳಾಗಿ ಗಬ್ಬೆದ್ದು ನಾರುತ್ತಿದೆ.

ಶುದ್ದ ಕುಡಿಯುವ ನೀರಿನ ಘಟಕದ ಸುತ್ತಲು ಬಹಿರ್ದೆಸೆ ಮಾಡುವುದರ ಜೊತೆಗೆ ಅಲ್ಲಿಯೇ ಮದ್ಯದ ಬಾಟಲಿ ಹಾಗೂ ಪಾಕೆಟ್‍ಗಳನ್ನು ಎಸೆಯುವುದು ಸಾಮಾನ್ಯವಾಗಿದೆ. ಅಲ್ಲದೇ ನೀರಿನ ಘಟಕದ ಸುತ್ತಲೂ ಮುಳ್ಳಿನ ಕಂಟಿಗಳು ಬೆಳೆದ್ದಿದ್ದು ಸ್ವಚ್ಛ ಮಾಡಿ ಎಷ್ಟೋ ವರ್ಷಗಳೇ ಕಳೆದಿವೆ.

ಹೊಸದಾಗಿ ಪ್ರಾರಂಭಿಸಿರುವ ಘಟಕದಲ್ಲಿಯೂ ನೀರು ಪಾಚಿಗಟ್ಟಿದ್ದು ಅಲ್ಲಿಯೂ ಕೂಡಾ ಇದೇ ಪರಿಸ್ಥಿತಿ ಇದೆ. ಇದರಿಂದ ಸುತ್ತ ಮುತ್ತಲಿನ ಜನತೆ ಆತಂಕಗೊಂಡಿದ್ದಾರೆ. ಅವಳಿ ನಗರಕ್ಕೆ ಕುಡಿಯುವ ನೀರು ವಿತರಣೆಯಲ್ಲಿ ಎಲ್ಲ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ನಿರತರಾಗಿದ್ದರಿಂದ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.