ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಪೀಠ ಜಾಗ ವಿವಾದಕ್ಕೆ ಕೊನೆಹಾಡಲು ಮೂರು ಮಂದಿಯ ಸಮಿತಿ ರಚನೆ ಮಾಡಿತ್ತು. ಎಫ್.ಎಂ ಖಲೀಫುಲ್ಲಾ, ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಸುಪ್ರೀಂ ನೇಮಕ ಮಾಡಿದ ಸಮಿತಿಯ ಸದಸ್ಯರಾಗಿದ್ದಾರೆ.
ಮಧ್ಯಸ್ಥಿಕೆ ಮೂಲಕ ವಿವಾದವನ್ನು ಅಂತ್ಯ ಮಾಡಲು ರಚಿಸಿದ್ದ ಸಮಿತಿಯ ಪ್ರಗತಿ ವರದಿಯನ್ನು ಪಂಚ ಸದಸ್ಯ ಪೀಠ ನಾಳೆ ಮೇಲ್ವಿಚಾರಣೆ ಮಾಡಲಿದೆ. ಮಧ್ಯಸ್ಥಿಕೆ ಸಂಪೂರ್ಣ ಗೌಪ್ಯವಾಗಿಡುವಂತೆ ಸಮಿತಿ ನೇಮಿಸುವ ವೇಳೆ ಸುಪ್ರೀಂ ಸೂಚಿಸಿತ್ತು.
-
Ayodhya case is listed tomorrow for hearing in the Supreme Court. pic.twitter.com/gY6zM0TSQt
— ANI (@ANI) May 9, 2019 " class="align-text-top noRightClick twitterSection" data="
">Ayodhya case is listed tomorrow for hearing in the Supreme Court. pic.twitter.com/gY6zM0TSQt
— ANI (@ANI) May 9, 2019Ayodhya case is listed tomorrow for hearing in the Supreme Court. pic.twitter.com/gY6zM0TSQt
— ANI (@ANI) May 9, 2019
ಮಧ್ಯಸ್ಥಿಕೆಗೆ ಸುಪ್ರೀಂ ನೀಡಿದ್ದ ಎಂಟು ವಾರಗಳ ಗಡುವು ಮೇ 3ಕ್ಕೆ ಅಂತ್ಯವಾಗಿದೆ. ಮಧ್ಯಸ್ಥಿಕೆ ಮಾತುಕತೆಯನ್ನು ಗೌಪ್ಯವಾಗಿಡಲಾಗಿದ್ದು ಅಯೋಧ್ಯೆ ಪಕ್ಕದ ಫೈಜಾಬಾದ್ನಲ್ಲಿ ನಡೆದಿದೆ. ಎಲ್ಲ ಮಾತುಕತೆಯಿಂದ ಮಾಧ್ಯಮವನ್ನು ಹೊರಗಿರಿಸಲಾಗಿತ್ತು. ಮಧ್ಯಸ್ಥಿಕೆಯ ಯಾವುದೇ ವಿಚಾರ ಮುದ್ರಣ,ದೃಶ್ಯ ಅಥವಾ ಇನ್ನಾವುದೇ ಮಾಧ್ಯಮದಲ್ಲಿ ಪ್ರಸಾರ ಆಗಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಕಟ್ಟಪ್ಪಣೆ ಮಾಡಿತ್ತು.
ಮಧ್ಯಸ್ಥಿಕೆ ಸಮಿತಿ ನೇಮಕ ಮಾಡಿದ ಎರಡು ತಿಂಗಳ ಬಳಿಕ ಅಯೋಧ್ಯೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುತ್ತಿದ್ದು ರಾಷ್ಟ್ರಮಟ್ಟದಲ್ಲಿ ಸಹಜ ಕುತೂಹಲಕ್ಕೆ ಕಾರಣವಾಗಿದೆ.