ದಿಮಾಪುರ (ನಾಗಾಲ್ಯಾಂಡ್): ಅರುಣಾಚಲ ಪ್ರದೇಶದ ಉತ್ತರ ಗಡಿಗಳಲ್ಲಿನ ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಈಶಾನ್ಯದ ಒಳನಾಡಿನ ಭದ್ರತಾ ಪರಿಸ್ಥಿತಿಗಳನ್ನು ಪರಿಶೀಲಿಸಲು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಎರಡು ದಿನಗಳ ಕಾಲ ನಾಗಾಲ್ಯಾಂಡ್ಗೆ ಪ್ರಯಾಣಿಸಿದ್ದಾರೆ.
ದಿಮಾಪುರದ ಕಾರ್ಪ್ಸ್ ಪ್ರಧಾನ ಕಚೇರಿಗೆ ತಲುಪಿರುವ ಸೇನಾ ಮುಖ್ಯಸ್ಥರಿಗೆ ಲೆಫ್ಟಿನೆಂಟ್ ಜನರಲ್ ಜಾನ್ಸನ್ ಮ್ಯಾಥ್ಯೂ, ಜನರಲ್ ಆಫೀಸರ್ ಕಮಾಂಡಿಂಗ್ ಸ್ಪಿಯರ್ ಕಾರ್ಪ್ಸ್ ಮತ್ತು ಡಿವಿಷನ್ ಕಮಾಂಡರ್‌ಗಳು ಸ್ವಾಗತ ಕೋರಿದ್ದಾರೆ. ಈ ಬಳಿಕ ಉತ್ತರ ಗಡಿಗಳಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸಿದ್ಧತೆ ಕುರಿತು ವಿವರಿಸಿದ್ದಾರೆ.
ಸೈನ್ಯದ ಮುಖ್ಯಸ್ಥರು ಅತ್ಯುತ್ತಮ ಜಾಗರೂಕತೆ ಕಾಪಾಡಿಕೊಂಡಿದ್ದಕ್ಕಾಗಿ ನರವಣೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚಟುವಟಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವಂತೆ ಸೂಚಿಸಿದರು.