ನವದೆಹಲಿ: ಉತ್ತರಪ್ರದೇಶದಲ್ಲಿ ಈ ಬಾರಿ ಬಿಜೆಪಿಯನ್ನು ಕಟ್ಟಿ ಹಾಕಲೇಬೇಕೆಂದು ಪಣತೊಟ್ಟು ಮತಸಮರಕ್ಕಿಳಿದಿದ್ದ ಕಾಂಗ್ರೆಸ್ ಈ ಬಾರಿಯೂ ಮುಖಭಂಗ ಅನುಭವಿಸಿದೆ. ಅಮಿತ್ ಶಾ-ಮೋದಿ ಹಾಗೂ ಯೋಗಿ ಪ್ಲಾನ್ ಮುಂದೆ ಕೈ ಪಕ್ಷದ ಸರ್ಕಸ್ ನಡೆಯಲಿಲ್ಲ. ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲನುಭವಿಸಿದ್ದರು. ಈ ಕುರಿತು ನಡೆದ ಆತ್ಮವಿಮರ್ಶಾ ಸಭೆಯಲ್ಲಿ ಮುಖಂಡರೇ ಕಚ್ಚಾಡಿಕೊಂಡಿದ್ದಾರೆ.
ಉತ್ತರ ಗೆಲ್ಲಲು ರಾಹುಲ್ ಗಾಂಧಿ ಸ್ವತಃ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಮತಪ್ರಚಾರಕ್ಕೆ ಇಳಿಸಿದ್ದರು. ಜನಸಂಖ್ಯೆಯಲ್ಲಿ ದೇಶದ ದೊಡ್ಡ ರಾಜ್ಯಕ್ಕೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಪ್ರಿಯಾಂಕಾ ಉತ್ತರ ಪ್ರದೇಶದಲ್ಲೆಲ್ಲಾ ಸುತ್ತಾಡಿ ಮತಭೇಟೆ ನಡೆಸಿದ್ದರು. ಆದರೂ ಪಕ್ಷ ಮಾತ್ರ ಮೇಲೇಳಲೇ ಇಲ್ಲ.
-
#WATCH: Argument between Congress leaders from Western Uttar Pradesh following a review meeting in Delhi on election results in UP; a Congress leader says, "it's our internal matter". pic.twitter.com/HUPt5uih2R
— ANI (@ANI) June 11, 2019 " class="align-text-top noRightClick twitterSection" data="
">#WATCH: Argument between Congress leaders from Western Uttar Pradesh following a review meeting in Delhi on election results in UP; a Congress leader says, "it's our internal matter". pic.twitter.com/HUPt5uih2R
— ANI (@ANI) June 11, 2019#WATCH: Argument between Congress leaders from Western Uttar Pradesh following a review meeting in Delhi on election results in UP; a Congress leader says, "it's our internal matter". pic.twitter.com/HUPt5uih2R
— ANI (@ANI) June 11, 2019
ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಇಂದು ಪೂರ್ವ ಉತ್ತರ ಪ್ರದೇಶದ ನಾಯಕರು ಆತ್ಮವಿಮರ್ಶಾ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಾಯಕರ ನಡುವೆ ಭಾರಿ ವಾಗ್ವಾದ ನಡೆದಿದೆ. ಕೆಲ ನಾಯಕರು ತೋಳೇರಿಸಿದ ಪ್ರಸಂಗವೂ ನಡೆಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ನಾಯಕರು, ಇದು ಪಕ್ಷದ ಆಂತರಿಕ ವಿಚಾರ ಎನ್ನುವ ಮೂಲಕ ವಿವಾದಕ್ಕೆ ತೇಪೆ ಹಚ್ಚಿ ಮುಗಿಸುವ ಪ್ರಯತ್ನ ಮಾಡಿದ್ದಾರೆ.