ಬೆಂಗಳೂರು: ಅಣ್ಣಾಮಲೈ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಎಲ್ಲೇ ಹೋದರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ನಗರ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದರು.
ದಕ್ಷ ಅಧಿಕಾರಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಣ್ಣಾಮಲೈ ಅಂತಹ ಅಧಿಕಾರಿ ನಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆಯ ವಿಷಯ. ಅವರ ರಾಜೀನಾಮೆ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ ಎಂದರು.
ಅಣ್ಣಾಮಲೈ ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಿರಲಿ. ಸಮಾಜ ಸೇವೆ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ತಮ್ಮ ಜೀವನ ಕಟ್ಟಿಕೊಂಡರೂ ಸಹ ಅವರ ಪ್ರಾಮಾಣಿಕತೆ ಅವರಿಗೆ ಶ್ರೀರಕ್ಷೆಯಾಗಿರುತ್ತದೆ ಎಂದು ಟಿ. ಸುನೀಲ್ಕುಮಾರ್ ಶುಭ ಕೋರಿದರು.