ETV Bharat / briefs

ಕೊಹ್ಲಿ ಜೊತೆ ಕಿರಿಕ್​!​ ಬಾಗಿಲು ಮುರಿದ ಅಂಪೈರ್​ಗೆ ಕೆಎಸ್‌ಸಿಎ 5,000 ರೂ ದಂಡ - ಆರ್​ಸಿಬಿ

ಮುಂಬೈ ವಿರುದ್ಧದ ಪಂದ್ಯದಲ್ಲಿ ಮಲಿಂಗಾ ಎಸೆದ ಕೊನೆಯ ಎಸೆತ ನೋಬಾಲ್​ ಆಗಿದ್ದರೂ ಗಮನಿಸದೆ ಆರ್​ಸಿಬಿ ಸೋಲಿಗೆ ಕಾರಣರಾಗಿದ್ದರು. ಮತ್ತೆ ಕೊನೆಯ ಲೀಗ್​ ಪಂದ್ಯದಲ್ಲಿ ನೋಬಾಲ್​ ಇಲ್ಲದಿದ್ದರೂ ನೋಬಾಲ್​ ಎಂದು ತೀರ್ಪು ನೀಡಿದ್ದಲ್ಲದೆ, ನಾಯಕ ಕೊಹ್ಲಿ ಜೊತೆ ವಾಕ್ಸಮರ ನಡೆಸಿದ್ದರು.

ಅಂಪೈರ್
author img

By

Published : May 7, 2019, 2:26 PM IST

ಬೆಂಗಳೂರು: ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಒಳ್ಳೆಯ ಎಸೆತವನ್ನು ನೋಬಾಲ್​ ಎಂದು ತೀರ್ಪು ನೀಡಿದ ಬಳಿಕ ಉಂಟಾದ ಬೆಳವಣಿಗೆಗಳಲ್ಲಿ ಅತಿರೇಕ ಪ್ರದರ್ಶಿಸಿದ ಇಂಗ್ಲೆಂಡ್​ ಅಂಪೈರ್​ ನಿಗಲ್‌ಗೆ ತಕ್ಕ ದಂಡ ಬಿದ್ದಿದೆ.

ಕೊನೆಯ ಲೀಗ್​ ಪಂದ್ಯವಾಡುತ್ತಿದ್ದ ವೇಳೆ ಆರ್​ಸಿಬಿಯ ಉಮೇಶ್ ಯಾದವ್ ಎಸೆದ ಕೊನೆಯ ಓವರ್​ನ 5 ನೇ ಎಸೆತವನ್ನು ಅಂಪೈರ್​ ನಿಗಲ್ ನೋಬಾಲ್​ ಎಂದು ನಿರ್ಣಯ ನೀಡಿದ್ದರು. ಆದರೆ ರೀಪ್ಲೇಯಲ್ಲಿ ಉಮೇಶ್​ ಯಾದವ್​ ಕಾಲು ಗೆರೆಯೊಳಗೆ ಇರುವುದು ಸ್ಪಷ್ಟವಾಗಿತ್ತು. ಇದರಿಂದ ಕೋಪಗೊಂಡ ಕೊಹ್ಲಿ ಹಾಗೂ ಉಮೇಶ್​ ಅಂಪೈರ್​ ವಿರುದ್ಧ ಮೈದಾನದಲ್ಲಿ ಕಿಡಿಕಾರಿದ್ದರು.

ಕೊಹ್ಲಿ ಜೊತೆ ವಾಗ್ವಾದ ನಡೆಸಿದ ಸಿಟ್ಟಲ್ಲೇ ಮೈದಾನದಿಂದ ಹೊರ ಬಂದ ಅಂಪೈರ್ ನಿಗಲ್ ಲಾಂಗ್, ಅಂಪೈರ್ ರೂಮಿಗೆ ಬಂದು ಬಾಗಿಲಿಗೆ ಒದ್ದಿದ್ದಾರೆ. ಇದರಿಂದ ಬಾಗಿಲು ಮುರಿದಿದೆ. ಅಂಪೈರ್ ದುರ್ವರ್ತನೆ ತೋರಿದ್ದಲ್ಲದೆ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬಿಸಿಸಿಐನ ಆಡಳಿತ ಸಮಿತಿಗೆ ಕೆಎಸ್​ಸಿಎ ದೂರು ನೀಡಲು ನಿರ್ಧರಿಸಿದೆ. ಜೊತೆಗೆ ಅಂಪೈರ್​ ರೂಮಿನ ಬಾಗಿಲು ಮುರಿದಿರುವುದಕ್ಕೆ 5,000 ರೂ ದಂಡವನ್ನು ಕೂಡ ವಸೂಲಿ ಮಾಡಿದೆ.

ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ಅಂಪೈರ್​ಗಳ ತಪ್ಪು ನಿರ್ಣಯಗಳು ಹೆಚ್ಚಾಗಿ ಕಂಡುಬಂದಿವೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಮಲಿಂಗಾ ಎಸೆದ ಕೊನೆಯ ಎಸೆತ ನೋಬಾಲ್​ ಆಗಿದ್ದರೂ ಅದನ್ನು ಗಮನಿಸದ ಅಂಪೈರ್‌, ಆರ್​ಸಿಬಿ ಸೋಲಿಗೆ ಕಾರಣರಾಗಿದ್ದರು. ಸಿಎಸ್​ಕೆ-ರಾಜಸ್ಥಾನ ಪಂದ್ಯದಲ್ಲಿ ಸ್ಟ್ರೈಟ್​ ಅಂಪೈರ್​ ನೋಬಾಲ್​ ನೀಡಿ, ನಂತರ ನಿರ್ಣಯ ವಾಪಸ್​ ತಗೆದುಕೊಂಡಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.