ನವದೆಹಲಿ: ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಕಪ್ಗೆ 15 ಸದಸ್ಯರ ತಂಡವನ್ನು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಇಂದು ಬಿಡುಗಡೆ ಮಾಡಿದೆ.
ಕಳೆದೆರಡು ವರ್ಷಗಳಲ್ಲಿ ಸೀಮಿತ ಓವರ್ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಫ್ಘಾನಿಸ್ತಾನ ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗುವ ಮೂಲಕ ವಿಶ್ವಕಪ್ಗೆ ಭರ್ಜರಿ ಎಂಟ್ರಿ ಪಡೆದುಕೊಂಡಿದೆ.
ಎರಡನೇ ವಿಶ್ವಕಪ್ ಆಡುತ್ತಿರುವ ಆಫ್ಘಾನಿಸ್ಥಾನ ತಂಡ 2015ರ ತಂಡಕ್ಕಿಂತ ಭಿನ್ನವಾಗಿದೆ. ಈಗಾಗಲೇ ಶ್ರೀಲಂಕಾ, ಬಾಂಗ್ಲಾದೇಶ,ವಿಂಡೀಸ್ ತಂಡಗಳನ್ನು ಮಣಿಸಿ ಭಾರತದಂತಹ ಬಲಿಷ್ಠ ತಂಡಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಏಷ್ಯಾಕಪ್ನಲ್ಲಿ ಆಫ್ಘಾನ್ ತಂಡ ನೀಡಿದ ಪ್ರದರ್ಶನವೇ ಸಾಕ್ಷಿ.
ಆದರೆ, ದುರಾದೃಷ್ಟವೆಂದರೆ ಕಳೆದ 2-3 ವರ್ಷಗಳಿಂದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅಸ್ಘರ್ ಆಫ್ಘಾನ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಗುಲ್ಬದಿನ್ ನೈಬ್ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಇದು ತಂಡದ ಕೆಲ ಆಟಗಾರರಲ್ಲೂ ಇರಿಸುಮುರಿಸು ತಂದಿದೆ. ಆದರೆ, ಒಟ್ಟಾರೆ ಆಫ್ಘಾನ್ ತಂಡವನ್ನು ನೋಡುವುದಾದರೆ ಯಾವುದೇ ತಂಡಕ್ಕಾದರು ಪೈಪೋಟಿ ನೀಡುವುದರ ಮಟ್ಟಿಗಿರುವುದು ಮಾತ್ರ ಸುಳ್ಳಲ್ಲ.
15 ಸದಸ್ಯರ ತಂಡ ಇಂತಿದೆ :
ಗುಲ್ಬದಿನ್ ನೈಬ್(ನಾಯಕ),ಮೊಹಮ್ಮದ್ ಶಹ್ಜಾದ್(ವಿಕೀ), ನೂರ್ ಅಲಿ ಜಾರ್ಡನ್, ರಶೀದ್ ಖಾನ್, ಹಜರತುಲ್ಹಾ ಝಾಝೈ, ರೆಹ್ಮತ್ ಶಾ, ಅಸ್ಘರ್ ಆಫ್ಘಾನ್, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಝಾರ್ಡನ್, ಸಮೀಉಲ್ಹಾ ಶಿನ್ವಾರಿ, ಮೊಹಮ್ಮದ್ ನಬಿ, ದವ್ಲಾತ್ ಝಾರ್ಡನ್, ಅಫ್ಟಾಬ್ ಆಲಂ, ಹಮೀದ್ ಹಸ್ಸನ್, ಮೂಜೀಬ್ ಉರ್ ರೆಹ್ಮಾನ್.