ಹೊಸಪೇಟೆ(ಬಳ್ಳಾರಿ): ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವೆಂಕಟಾಪುರ ಗ್ರಾಮ ಪಾಸಿಟಿವ್ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದು, ಉಪವಿಭಾಗಾಧಿಕಾರಿ ಸಿದ್ರಾಮೇಶ್ವರ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ 57 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಪ್ರಕರಣಗಳು ಹೆಚ್ಚಾಗಲು ಸೋಂಕಿತರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಕಾರಣ. ಚಿಕಿತ್ಸೆ ಪಡೆಯುತ್ತಿರುವವರು ಅಧಿಕಾರಿಗಳ ಸಲಹೆಗಳನ್ನು ಪಾಲಿಸಬೇಕು. ನಿರ್ಲಕ್ಷ್ಯದಿಂದ ವರ್ತಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಒಂದೇ ಕುಟುಂಬದ 11 ಜನಕ್ಕೆ ಪಾಸಿಟಿವ್ ಬಂದವರನ್ನು ಹೊಸಪೇಟೆಯ ಕೊರೊನಾ ಕೇರ್ ಸೆಂಟರ್ಗೆ ಸಾಗಿಸಲಾಯಿತು. ತಹಶೀಲ್ದಾರ್ ವಿಶ್ವನಾಥ , ಗ್ರಾ.ಪಂ. ಅಧ್ಯಕ್ಷೆ ಉಮಾ ಯಲ್ಲಪ್ಪ, ತಾ.ಆರೋಗ್ಯ ಅಧಿಕಾರಿ ಭಾಸ್ಕರ, ಪಿ.ಎಸ್.ಐ ಶಿವಕುಮಾರ, ಕಂದಾಯ ನಿರೀಕ್ಷಕ ಅಂದಾನ ಗೌಡ, ಗ್ರಾ.ಪಂ ಪಿಡಿಓ ಮಂಜುಳಾರಾಣಿ, ಕಾರ್ಯದರ್ಶಿ ನೀರಳ್ಳಿ ಮಂಜುನಾಥ, ಗ್ರಾಮಲೆಕ್ಕಿಗರಾದ ಶಾರದ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಾಧಾಕೃಷ್ಣ ಇನ್ನಿತರರಿದ್ದರು.