ಲಾಸ್ ಏಂಜಲೀಸ್: ಕೊರೊನಾ ಬಳಿಕ ಹಾಲಿವುಡ್ ಚಲನಚಿತ್ರಗಳು ಒಂದೊಂದಾಗಿ ತೆರೆಮೇಲೆ ಬರುತ್ತಿದೆ. ಇದೀಗ ಭಯಾನಕ ಥ್ರಿಲ್ಲರ್ ಕಥೆ ಹೊಂದಿರುವ "ಎ ಕ್ವೈಟ್ ಪ್ಲೇಸ್ ಪಾರ್ಟ್ 2" ಸಿನಿಮಮಾ ಉತ್ತರ ಅಮೆರಿಕದ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಪಡೆದಿದೆ.
ಎಮಿಲಿ ಬ್ಲಂಟ್ ಅಭಿನಯದ ಈ ಚಿತ್ರ ಶುಕ್ರವಾರದಿಂದ ಭಾನುವಾರದವರೆಗೆ 48 ಮಿಲಿಯನ್ ಡಾಲರ್ ಗಳಿಕೆ ಮಾಡಿದೆ. ಸಿನಿಮಾವನ್ನು ಬ್ಲಂಟ್ ಅವರ ಪತಿ, ನಟ-ಚಲನಚಿತ್ರ ನಿರ್ಮಾಪಕ ಜಾನ್ ಕ್ರಾಸಿನ್ಸ್ಕಿ ನಿರ್ದೇಶಿಸಿದ್ದಾರೆ.
ವೆರೈಟಿ ಡಾಟ್ ಕಾಮ್ ಪ್ರಕಾರ, ಈ ಚಿತ್ರವು 3,726 ಕಡೆಯಲ್ಲಿ ಬಿಡುಗಡೆಯಾಗಿದ್ದು, ಕೇವಲ ನಾಲ್ಕು ದಿನಗಳಲ್ಲಿ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ.
"ಎ ಕ್ವೈಟ್ ಪ್ಲೇಸ್ ಪಾರ್ಟ್ 2"ವನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ತೆರೆಯಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ತಡೆಯಲಾಯಿತು.