ಮೈಸೂರು : ಎನ್.ಆರ್. ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ ನಗರ ಪಾಲಿಕೆ ಸದಸ್ಯನ ಏಕಾಂಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪಾಲಿಕೆ ಸದಸ್ಯ ಸಮೀ ಅಜ್ಜು, ಎನ್.ಆರ್.ಕ್ಷೇತ್ರದಲ್ಲಿರುವ ಬಿ.ಬಿ.ಆಯಿಷಾ ಆಸ್ಪತ್ರೆಯನ್ನು ಕೋವಿಡ್ ಕೇರ್ ಆಗಿ ಪರಿವರ್ತಿಸಿ ಚಿಕಿತ್ಸೆಗಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಬಿ.ಬಿ.ಆಯಿಷಾ ಆಸ್ಪತ್ರೆಯನ್ನು ಪುನಾರಂಭ ಮಾಡಿ, ಎನ್.ಆರ್.ಕ್ಷೇತ್ರದಲ್ಲಿ ಬೆಡ್ಗಳ ಕೊರತೆ ನೀಗಿಸಿ, ಅಲ್ಲದೆ ಕಳೆದ ಬಾರಿಯೂ ಕೋವಿಡ್ ಚಿಕಿತ್ಸೆಗಾಗಿ ಬಿ.ಬಿ ಆಯಿಷಾ ಆಸ್ಪತ್ರೆ ಬಳಸಿಕೊಳ್ಳಲಾಗಿತ್ತು.
ಹಾಗಾಗಿ, ಬಿಬಿ ಆಯಿಷಾ ಆಸ್ಪತ್ರೆ ಮತ್ತೆ ಕೊರೊನಾ ಚಿಕಿತ್ಸೆಗಾಗಿ ಪುನಾರಂಭಿಸಿ ಆ ಭಾಗದ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು.