ETV Bharat / briefs

ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು...! ಶಿಕ್ಷಕಿ ಕೊಂದು ಸಾವಿನ ಕದ ತಟ್ಟಿದ ವ್ಯಕ್ತಿ - TEACHER DEATH

ಕಾಫಿ ನಾಡಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಶಿಕ್ಷಕಿವೋರ್ವರನ್ನು ಕೊಂದ ವ್ಯಕ್ತಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿಕ್ಷಕಿಯ ರಕ್ಷಣೆಗೆ ಮುಂದಾದ ವಿದ್ಯಾರ್ಥಿ ದಿನೇಶ್, ಕಾರ್ಮಿಕ ರಾಜುಗೆ ಗುಂಡು ತಗುಲಿವೆ.

ನಗರದಲ್ಲಿ ಮತ್ತೇ ಗುಂಡಿನ ಸದ್ದು.... ಶಿಕ್ಷಕಿಯನ್ನು ಕೊಂದು ತಾನೂ ಆತ್ಮಹತ್ಯೆ
author img

By

Published : Jun 14, 2019, 10:48 AM IST

Updated : Jun 14, 2019, 10:54 AM IST

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಮೇಲೆ ಗುಂಡಿನ ದಾಳಿ ನಡೆದಿದೆ. ಶಿಕ್ಷಿಯ ಪ್ರಾಣ ತೆಗೆದ ಬಳಿಕ ಬಲ್ಯಮುಂಡೂರು ಗ್ರಾಮದ ಮಾಚಿಮಾಡ ಜಗದೀಶ್ ಕೂಡ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

A man committed suicide after killed teacher
ಶಿಕ್ಷಕಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಇನ್ನು ಈ ವೇಳೆ ಶಿಕ್ಷಕಿ ರಕ್ಷಣೆಗೆ ಮುಂದಾಗಿದ್ದ ವಿದ್ಯಾರ್ಥಿ ದಿನೇಶ್, ಕಾರ್ಮಿಕ ರಾಜುಗೆ ಗುಂಡು ತಗುಲಿವೆ. ವೈದ್ಯರು ಗಾಯಾಳುಗಳ ದೇಹದೊಳಗೆ ಹೊಕ್ಕಿರುವ ಗುಂಡುಗಳನ್ನು ಹೊರತೆಗೆದು ಚಿಕಿತ್ಸೆ ನೀಡುತ್ತಿದ್ದಾರೆ.

ಬಾಳೆಲೆ ಉಪ‌ ಪೊಲೀಸ್ ಠಾಣೆ ಮುಂಭಾಗ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕಿ ಕೊಲೆಗೆ ಕಾರಣವೇನು, ಆ ಶಿಕ್ಷಕಿ ಮತ್ತು ಕೊಲೆಗಾರನ ನಡುವೆ ವೈಷಮ್ಯ ಇತ್ತಾ ಎಂಬುದರ ಬಗ್ಗೆ ತನಿಖೆ ಬಳಿಕವಷ್ಟೇ ಮಾಹಿತಿ ತಿಳಿದುಬರಬೇಕಿದೆ.

Intro:

ಬಸ್ ಗೆ ಕಾಯ್ದು ನಿಂತ ಶಿಕ್ಷಕಿಗೆ ಗುಂಡು

ಕೊಡಗು: ದುಷ್ಕರ್ಮಿಗಳ ಗುಂಡೇಟಿಗೆ ಶಿಕ್ಷಕಿ ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ನಡೆದಿದೆ.
ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಗುಂಡೇಟಿಗೆ ಬಲಿಯಾದ ಶಿಕ್ಷಕಿ.ಮುಂಜಾನೆ 8:15 ರ ಸುಮಾರಿಗೆ ಶಾಲಾ ಬಸ್ ಕಾಯುತ್ತಿದ್ದಾಗ ತೋಟದಿಂದ ಬಂದ ಗುಂಡು ತಾಕಿದೆ. ಶಿಕ್ಷಕಿಯನ್ನ ರಕ್ಷಿಸಲು ಮುಂದಾದ ದಿನೇಶ್ ಗೋಣಿಕೊಪ್ಪಲು ಕಾಲೇಜು ವಿದ್ಯಾರ್ಥಿ ದಿನೇಶ್ ಎಂಬಾತನಿಗೆ ಗಾಯಗಳಾಗಿವೆ. ಈ ಸಂಬಂಧ ಬಾಳೆಲೆ ಪೊಲೀಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬಾಳೆಲೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Body:0Conclusion:0
Last Updated : Jun 14, 2019, 10:54 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.