ಕೋಲ್ಕತ್ತಾ: ದೇಶದ ವಿವಿಧ ರಾಜ್ಯಗಳಲ್ಲಿ ಇಂದು 7ನೇ ಹಾಗೂ ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೂ ಇಂದು ವೋಟಿಂಗ್ ಆಗುತ್ತಿದೆ. ಇದರ ಮಧ್ಯೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
-
West Bengal: Additional forces arrive at polling station number 189 in Basirhat. BJP MP candidate from Basirhat, Sayantan Basu has alleged that TMC workers are not allowing people to cast their vote. pic.twitter.com/Na55Lo1ORu
— ANI (@ANI) May 19, 2019 " class="align-text-top noRightClick twitterSection" data="
">West Bengal: Additional forces arrive at polling station number 189 in Basirhat. BJP MP candidate from Basirhat, Sayantan Basu has alleged that TMC workers are not allowing people to cast their vote. pic.twitter.com/Na55Lo1ORu
— ANI (@ANI) May 19, 2019West Bengal: Additional forces arrive at polling station number 189 in Basirhat. BJP MP candidate from Basirhat, Sayantan Basu has alleged that TMC workers are not allowing people to cast their vote. pic.twitter.com/Na55Lo1ORu
— ANI (@ANI) May 19, 2019
ಚುನಾವಣೆ ನಡೆಯುತ್ತಿರುವ 8ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿರುವುದಾಗಿ ವರದಿಯಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ಟಿಎಂಸಿ ಕಾರ್ಯಕರ್ತರು ಮತದಾರರಿಗೆ ವೋಟ್ ಮಾಡಲು ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಭಟ್ಟರಾ ಕ್ಷೇತ್ರದಲ್ಲಿ ವೋಟ್ ಮಾಡಲು ಟಿಎಂಸಿ ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೆಲ ಮತಗಟ್ಟೆಗಳ ಬಳಿ ಗುಂಡಿನ ಸದ್ದು ಸಹ ಕೇಳಿ ಬಂದಿದ್ದು, ಕೆಲವೊಂದು ವಾಹನಗಳು ಬೆಂಕಿಗಾಹುತಿಯಾದ ಮಾಹಿತಿ ಲಭ್ಯವಾಗಿದೆ.
ಬಿಜೆಪಿಗೆ ವೋಟ್ ಹಾಕಲು ಮುಂದಾಗುತ್ತಿರುವ ಮತದಾರರನ್ನು ಗುರುತಿಸಿ, ಅವರನ್ನ ತಡೆಯುತ್ತಿದ್ದಾರೆಂದು ಬಿಜೆಪಿ ಆರೋಪ ಮಾಡಿದೆ. ಇನ್ನು ಪಶ್ಚಿಮ ಬಂಗಾಳದ 24 ನಾರ್ಥ್ ಪರಾಗನ್ದಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ ಮೇಲೆ ಟಿಎಂಸಿ ಹಲ್ಲೆ ಮಾಡಿದೆ.ಇದರ ಮಧ್ಯೆ ಪಶ್ಚಿಮ ಬಂಗಾಳದ ಇಸ್ಲಾಮಪುರ ಮತಗಟ್ಟೆ ಬಳಿ ಬಾಂಬ್ ಕೂಡ ಸ್ಫೋಟಗೊಳಿಸಿದ್ದಾಗಿ ತಿಳಿದು ಬಂದಿದೆ.