ಪುಣೆ: ಇಂದಿನ ಆಧುನಿಕ ಭರಾಟೆಯ ಜೀವನದಲ್ಲಿ ಕೆಲ ಗಂಟೆಗಳ ಕಾಲ ಕರೆಂಟ್ ಇಲ್ಲ ಅಂದರೆ ಸಾಕು ಎಲ್ಲವೂ ಕಳೆದು ಹೋದಂತೆ ಅನಿಸಲು ಶುರುವಾಗುತ್ತದೆ. ಆದರೆ ಓರ್ವ ನಿವೃತ್ತ ಪ್ರಾಧ್ಯಾಪಕಿ ಕಳೆದ 79 ವರ್ಷಗಳಿಂದಲೂ ಕರೆಂಟ್ ಇಲ್ಲದೇ ಜೀವನ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಪುಣೆಯ ಬುಧವಾರ್ ಪೇಟ್ನಲ್ಲಿ ವಾಸವಾಗಿರುವ 79 ವರ್ಷದ ಡಾ.ಹೇಮಾ ಸಣೆ ಇಲ್ಲಿಯವರೆಗೂ ಇಲೆಕ್ಟ್ರಿಸಿಟಿಯ ಬಳಕೆ ಮಾಡದೇ ಜೀವನ ಸಾಗಿಸುತ್ತಿದ್ದಾರೆ. ಪರಿಸರ ಪ್ರೇಮಿಯಾಗಿರುವ ಇವರು, ಪರಿಸರ ಪ್ರೇಮವೇ ಇಂತಹ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಹೇಳುತ್ತಾರೆ. ಜನರ ಜಂಜಾಟದಿಂದ ದೂರವೇ ಉಳಿದಿರುವ ಡಾ ಹೇಮಾ, ಬದುಕಲು ಆಹಾರ,ಮನೆ ಹಾಗೂ ಬಟ್ಟೆ ಅತ್ಯವಾಗಿದ್ದು, ಕರೆಂಟ್ ಯಾಕೆ ಬೇಕು ಎಂದು ಪ್ರಶ್ನೆ ಮಾಡ್ತಾರೆ. ಈ ಹಿಂದೆ ವಿದ್ಯುತ್ ಇಲ್ಲದೇ ನಾವು ಜೀವನ ನಡೆಸುತ್ತಿದ್ದೇವು ಎಂದು ಇತರರಿಗೆ ಕಿವಿಮಾತು ಹೇಳಿದ್ದಾರೆ.
ಇವರೊಂದಿಗೆ ಸಾಕುನಾಯಿ,ಎರಡು ಬೆಕ್ಕು ಇವೆ. ಮನೆಯ ಸುತ್ತಲೂ ಅನೇಕ ಪಕ್ಷಿಗಳು ವಾಸವಾಗಿದ್ದು, ಅವುಗಳೇ ನನ್ನ ಸ್ನೇಹಿತರು ಎಂದು ಹೇಳುತ್ತಾರೆ. ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯಿಂದ ವನಸ್ಪತಿ ವಿಜ್ಞಾನ ವಿಷಯದ ಮೇಲೆ ಪಿಹೆಚ್ಡಿ ಕೂಡ ಮಾಡಿದ್ದಾರೆ.