ETV Bharat / briefs

ಕಲ್ಪತರು ನಾಡಿನ ಜನರಲ್ಲಿ ಮಂದಹಾಸ:  6 ಕೊರೊನ ಸೋಂಕಿತರು ಗುಣಮುಖ

ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದ ತುಮಕೂರು ಜಿಲ್ಲೆಯ ಸೋಂಕಿತರ ಪೈಕಿ 6 ಜನರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಮುಕ್ತಿ ಪಡೆದಿದ್ದಾರೆ.

6 six corona patients discharged in tumkuru

author img

By

Published : Jun 9, 2020, 12:31 PM IST

ತುಮಕೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಆತಂಕದ ನಡುವೆ, ಆಸ್ಪತ್ರೆಗೆ ದಾಖಲಾದವರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ 6 ಮಂದಿ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ 28 ಮಂದಿ ಗುಣಮುಖರಾದಂತಾಗಿದೆ. ಇನ್ನು ಮೂವರು ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಒಬ್ಬರು ಐಸೋಲೇಷನ್ ನಲ್ಲಿದ್ದಾರೆ. 346 ಮಂದಿಯ ಗಂಟಲು ದ್ರವ ಸ್ಯಾಂಪಲ್ ಗಳ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದ್ದು, 2193 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.

ಇದುವರೆಗೂ ಜಿಲ್ಲೆಯಲ್ಲಿ 11,245 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 10,288 ಮಂದಿಯ ಸ್ಯಾಂಪಲ್ ಗಳಲ್ಲಿ ನೆಗೆಟಿವ್ ಕಂಡುಬಂದಿದೆ. 30 ಮಂದಿಯನ್ನು ಶಂಕಿತರೆಂದು ಗುರುತಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
346 ಜನರ ಸ್ಯಾಂಪಲ್ ವರದಿಯನ್ನು ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ 33 ಮಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಇಬ್ಬರು ಮೃತಪಟ್ಟಿದ್ದಾರೆ. 13 ವರ್ಷದ ಬಾಲಕ ಸೇರಿ 28 ಮಂದಿ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.