ETV Bharat / briefs

ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್​ಟೇಬಲ್​​ ಸೇರಿ ಒಟ್ಟು 6 ಜನರಲ್ಲಿ ಕೊರೊನಾ ಪತ್ತೆ - ಕೋವಿಡ್-19

ಪೊಲೀಸ್ ಕಾನ್ಸ್​ಟೇಬಲ್​​ ಸೇರಿ ಒಟ್ಟು 6 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 228ಕ್ಕೆ ಏರಿಕೆಯಾಗಿದೆ. ಇಂದು 5 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

6 new corona cases found in vijayapura
6 new corona cases found in vijayapura
author img

By

Published : Jun 13, 2020, 9:37 PM IST

ವಿಜಯಪುರ: ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್​ಟೇಬಲ್​​ ಸೇರಿ ಆರು ಜನರಲ್ಲಿ ಕೊರೊನಾ ವೈರಸ್​ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 228ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಓರ್ವ ಬಾಲಕ, ಯುವಕ ಹಾಗೂ ನಾಲ್ಕು ಜನ ಪುರುಷರಿಗೆ ಕೊರೊನಾ ಸೊಂಕು ತಗುಲಿದೆ. ಕಂಟೈನ್ಮೆಂಟ್ ಪ್ರದೇಶ ಜಲನಗರ ಪೊಲೀಸ್ ಠಾಣೆಯ 46 ವರ್ಷದ ಪೇದೆಗೂ ಕೊರೊನಾ ಸೊಂಕು ತಗುಲಿದ್ದು, ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಪೊಲೀಸ್ ಪೇದೆ ಕಂಟೈನ್ಮೆಂಟ್ ಝೋನ್​​ನಲ್ಲಿ ಕರ್ತವ್ಯ ನಿರ್ವಹಿಸಿದ್ದನು.

6 new corona cases found in vijayapura
ವಿಜಯಪುರ ಜಿಲ್ಲಾ ಆಸ್ಪತ್ರೆ
ಮಹಾರಾಷ್ಟ್ರದಿಂದ ಬಂದಿರುವ ಇಬ್ಬರು, ಕಂಟೈನ್ಮೆಂಟ್ ಏರಿಯಾದ ಮೂರು ಜನ, ಗಂಟಲು ನೋವು, ಜ್ವರದಿಂದ ಬಳಲುತ್ತಿದ್ದ 9 ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಎಲ್ಲರನ್ನೂ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.5 ಜನ ಗುಣಮುಖಇಂದು 5 ಜನ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 157 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 70 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.