ತುಮಕೂರು: ರಾಜ್ಯಾದ್ಯಂತ ಐಎಂಎ ವಂಚನೆ ಪ್ರಕರಣ ಸದ್ದು ಮಾಡಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲೂ ಖಾಸಗಿ ಕಂಪನಿಯೊಂದು ಜನರಿಗೆ ಮಕ್ಮಲ್ ಟೋಪಿ ಹಾಕಿದೆ ಎಂದು ಆರೋಪ ಕೇಳಿಬಂದಿದೆ.
ಈಜಿ ಮೈಂಡ್ ಸಂಸ್ಥೆಯಿಂದ ಸುಮಾರು 30 ರಿಂದ 35 ಲಕ್ಷ ರೂ. ವಂಚನೆಯಾಗಿದೆ ಎಂದು ದಾಖಲಾಗಿರುವ ದೂರು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಈಜಿ ಮೈಂಡ್ ಸಂಸ್ಥೆಯಿಂದ ವಂಚನೆಗೊಳಗಾಗಿದ್ದವರ ಪೈಕಿ ಕೇವಲ 10 ಜನ ಮಾತ್ರ ಸಂಸ್ಥೆ ವಿರುದ್ಧ ದೂರು ನೀಡಿದ್ದಾರೆ ಎಂದು ಅವರು ತಿಳಿಸಿದರು.
ದೂರು ನೀಡಲು ಒಂದು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನಗರದ ಚಿಲುಮೆ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ವಂಶಿ ಕೃಷ್ಣ ಹೇಳಿದ್ರು.
ಈಜಿ ಮೈಂಡ್ ಸಂಸ್ಥೆಯ ಮಾಲೀಕ ಅಸ್ಲಮ್ ವಿದೇಶಕ್ಕೆ ಪರಾರಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.