ಧರ್ಮಶಾಲಾ (ಹಿಮಾಚಲಪ್ರದೇಶ) : ಟಿಬೇಟಿಯನ್ರ ಜನಪ್ರಿಯ ಗ್ಯಾಲಿಯಂ ಚೆನ್ಮೊ ಮೆಮೊರಿಯಲ್ ಗೋಲ್ಡ್ ಕಪ್ (ಜಿಸಿಎಮ್ಜಿಸಿ) ನಿನ್ನೆಯಿಂದ ಆರಂಭಗೊಂಡಿದೆ.
25 ನೇ ಟಿಬೇಟಿಯನ್ ಫುಟ್ಬಾಲ್ ಟೂರ್ನಮೆಂಟ್ ಇದಾಗಿದೆ. 10 ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್ನಲ್ಲಿ ಒಟ್ಟು 23 ತಂಡಗಳು ಭಾಗವಹಿಸಿವೆ.
ವಿವಿಧೆಡೆ ನೆಲಸಿರುವ ಟಿಬೇಟಿಯನ್ರು ಬಂದು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ವಿಶೇಷ ಎಂದರೆ, 2018ರಲ್ಲಿ ನಡೆದ 24 ನೇ ಜಿಸಿಎಂಜಿಸಿ(ಗ್ಯಾಲಿಯಂ ಚೆನ್ಮೋ ಮೆಮೋರಿಯಲ್ ಗೋಲ್ಡ್ ಕಪ್) ಗೋಲ್ಡ್ ಕಪ್ನಲ್ಲಿ ಕರ್ನಾಟಕದ ಮುಂಡಗೋಡಿನ ಟಿಬೇಟಿಯನ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು.
.