ಲಂಡನ್: ಕಿವೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ಗಳ ಹೀನಾಯ ಸೋಲು ಕಾಣುವ ಮೂಲಕ ವಿಶ್ವಕಪ್ ಆರಂಭದಲ್ಲಿ ಹಿನ್ನೆಡೆ ಅನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಕೊಹ್ಲಿ ಪಡೆ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡು ಕೇವಲ 179 ರನ್ಗಳಿಗೆ ಆಲೌಟ್ ಅಗಿತ್ತು. ಭಾರತದ ಪರ ರವೀಂದ್ರ ಜಡೇಜಾ 54 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಇವರ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಸೇರಿತ್ತು. 30 ರನ್ಗಳಿಸಿ ಹಾರ್ದಿಕ್ ಪಾಂಡ್ಯ 2ನೇ ಗರಿಷ್ಠ ಸ್ಕೋರರ್ ಎನಿಸಿದರು.
-
New Zealand win by 6 wickets in the warm-up game against #TeamIndia #CWC19 pic.twitter.com/YgenyGT6Nn
— BCCI (@BCCI) May 25, 2019 " class="align-text-top noRightClick twitterSection" data="
">New Zealand win by 6 wickets in the warm-up game against #TeamIndia #CWC19 pic.twitter.com/YgenyGT6Nn
— BCCI (@BCCI) May 25, 2019New Zealand win by 6 wickets in the warm-up game against #TeamIndia #CWC19 pic.twitter.com/YgenyGT6Nn
— BCCI (@BCCI) May 25, 2019
180 ರನ್ಗಳ ಸಾಧಾರಣ ಗುರಿ ಪಡೆದ ಕಿವೀಸ್ ಪಡೆದ ನಾಯಕ ಕೇನ್ ವಿಲಿಯಮ್ಸನ್ ಪಡೆ ನಿಗದಿತ ಓವರ್ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಮನ್ರೊ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಗಪ್ಟಿಲ್ 22 ರನ್ಗೆ ಸೀಮಿತವಾದರು. ಆದರೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ನಾಯಕ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ 3 ನೇ ವಿಕೆಟ್ಗೆ 114 ರನ್ ಸೇರಿಸಿ ತಂಡವನ್ನು ಗೆಲುವಿನ ಸನಿಹ ತಂದು ಔಟಾದರು.
ಕೇನ್ 87 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರೆ, ಟೇಲರ್ 75 ಎಸೆತಗಳಲ್ಲಿ 8 ಬೌಂಡರಿ ಸಹಿತ 71 ರನ್ಗಳಿಸಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ಜಡೇಜಾ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು.
ಬೂಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದರು.
ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಮೇ28 ರಂದು ಬಾಂಗ್ಲಾದೇಶ ಜೊತೆ ಸೆಣಸಲಿದೆ.