ಲಂಡನ್: ವಿಶ್ವಕಪ್ ಗೆಲ್ಲುವ ರೇಸ್ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ಭಾರತ, ಇಂಗ್ಲೆಂಡ್ ತಂಡ ಇಡೀ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಕಿವೀಸ್ ಮಾಜಿ ಕ್ಯಾಪ್ಟನ್ ಮೆಕ್ಕಲಮ್ ಭವಿಷ್ಯ ನುಡಿದಿದ್ದಾರೆ.
ತವರಿನ ಲಾಭ ಪಡೆಯಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧವೂ, ಏಕದಿನ ಶ್ರೇಯಾಂಕದಲ್ಲಿ 2 ನೇ ಸ್ಥಾನದಲ್ಲಿರುವ ಭಾರತ ತಂಡ, ಇಂಗ್ಲೆಂಡ್ ವಿರುದ್ಧವೂ ಸೋಲು ಕಾಣಲಿವೆ ಎಂದು ಮೆಕ್ಕಲಮ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್, ದ.ಆಫ್ರಿಕಾ, ಪಾಕಿಸ್ತಾನ ತಂಡಗಳು 5 ಗೆಲುವು 4, ಸೋಲು ಕಾಣಲಿವೆ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳೂ ಕೇವಲ ಒಂದು ಪಂದ್ಯ ಗೆಲ್ಲಲಿವೆ. ಕ್ರಿಕೆಟ್ ಶಿಶು ಎನಿಸಿಕೊಂಡಿರುವ ಅಫ್ಘಾನಿಸ್ತಾನ 2 ಪಂದ್ಯಗಳಲ್ಲಿ ಜಯ ಸಾಧಿಸಲಿದೆ ಎಂದು 10 ತಂಡಗಳ ಭವಿಷ್ಯಷನ್ನು ಬರೆದು ತಮ್ಮ ಇನ್ಸ್ಟಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ ಮೆಕ್ಕಲಮ್ ಭವಿಷ್ಯ ಒಂದೇ ದಿನದಲ್ಲಿ ಸುಳ್ಳಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು 21 ರನ್ಗಳಿಂದ ಸೋಲಿಸಿದೆ. ಅಲ್ಲದೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಕೇವಲ ಒಂದೇ ಪಂದ್ಯ ಗೆಲ್ಲುತ್ತದೆ ಎಂಬ ಮೆಕ್ಕಲಮ್ ಭವಿಷ್ಯವನ್ನು ಹಲವರು ಟೀಕಿಸಿದ್ದಾರೆ.