ETV Bharat / briefs

ಕೆಲವು ಪಂದ್ಯಗಳಲ್ಲಿ ಭಾರತ ತಂಡ ಕಿತ್ತಳೆ ಬಣ್ಣದ ಜರ್ಸಿ ತೊಡಲಿದೆ... ಕಾರಣ?

ವಿಶ್ವಕಪ್​ನಲ್ಲಿ ಭಾರತ, ಶ್ರೀಲಂಕಾ, ಇಂಗ್ಲೆಂಡ್​ ಹಾಗೂ ಅಫ್ಘಾನಿಸ್ತಾನ ತಂಡಗಳು ನೀಲಿ ಬಣ್ಣದ ಜರ್ಸಿ ತೊಡುತ್ತಿವೆ. ಇದರಿಂದ ಒಂದೇ ಪಂದ್ಯದಲ್ಲಿ ಈ ತಂಡಗಳು ಎದುರು ಬದುರಾದಾಗ ಗೊಂದಲ ಉಂಟಾಗಬಾರದೆಂದು ಪ್ರಸಾರ ಸಂಸ್ಥೆಗಳ ಕೋರಿಕೆಯ ಮೇರೆಗೆ ಐಸಿಸಿ ಎರಡು ಜರ್ಸಿಗಳನ್ನು ತೊಡುವುದಕ್ಕೆ ಕೆಲವು ತಂಡಗಳಿಗೆ ತಿಳಿಸಿದೆ.

ind
author img

By

Published : May 27, 2019, 4:45 PM IST

ಲಂಡನ್​: ವಿಶ್ವಕಪ್​ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಂಡ ಎರಡು ಬಣ್ಣದ ಜರ್ಸಿ ತೊಟ್ಟು ಆಡಬೇಕಾದ ಪರಿಸ್ಥಿತಿ ಎದುರಾಗಿದೆ, ಇದಕ್ಕೆ ಭಾರತವೂ ಸಿದ್ದವಾಗಿದೆ ಎಂಬ ವಿಚಾರ ಕೇಳಿಬರುತ್ತಿದೆ.

ವಿಶ್ವಕಪ್​ನಲ್ಲಿ ಭಾರತ, ಶ್ರೀಲಂಕಾ,ಇಂಗ್ಲೆಂಡ್​ ಹಾಗೂ ಅಫ್ಘಾನಿಸ್ಥಾನ ತಂಡಗಳು ನೀಲಿ ಬಣ್ಣದ ಜರ್ಸಿ ತೊಡುತ್ತಿವೆ. ಇದರಿಂದ ಒಂದೇ ಪಂದ್ಯದಲ್ಲಿ ಈ ತಂಡಗಳು ಎದುರುಬದುರಾದಾಗ ಗೊಂದಲ ಉಂಟಾಗಬಾರದೆಂದು ಪ್ರಸಾರ ಸಂಸ್ಥೆಗಳ ಕೋರಿಕೆಯ ಮೇರೆಗೆ ಐಸಿಸಿ ಎರಡು ಜರ್ಸಿಗಳನ್ನು ತೊಡುವುದಕ್ಕೆ ಕೆಲವು ತಂಡಗಳಿಗೆ ತಿಳಿಸಿದೆ.

ಈ ಟೂರ್ನಿಯಲ್ಲಿ ಭಾರತ ಅಫ್ಘಾನಿಸ್ಥಾನ ಹಾಗೂ ಇಂಗ್ಲೆಂಡ್​ ವಿರುದ್ಧದ ಪಂದ್ಯಗಳಲ್ಲಿ ಆರೆಂಜ್​ ಜರ್ಸಿ ತೊಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಲ್ಲದೆ ಮುಂದೆ ನಡೆಯುವ ಐಸಿಸಿ ಟೂರ್ನಿಗಳಲ್ಲೂ ಈ ನಿಯಮ ಜಾರಿಗೆ ಬರಲಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ಹಾಗೂ ವೆಸ್ಟ್​ ಇಂಡೀಸ್​ ತಂಡಗಳನ್ನು ಬಿಟ್ಟು ಉಳಿದ ತಂಡಗಳು ಎರಡು ಬಣ್ಣದ ಜರ್ಸಿಯುಳ್ಳ ಕಿಟ್​ಗಳನ್ನು ಪಡೆಯಲಿವೆ.

ಭಾರತವಲ್ಲದೇ, ದ.ಆಫ್ರಿಕಾ,ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಹಸಿರು ಬಣ್ಣದ ಜರ್ಸಿ ತೊಡುತ್ತಿರುವುದರಿಂದ ಈ ಮೂರು ಪಂದ್ಯಗಳು ಎದುರು ಬದುರಾದಾಗ ಬೇರೆ ಬಣ್ಣದ ಜರ್ಸಿ ತೊಡಲಿದ್ದಾರೆ. ಈಗಾಗಲೇ ಬಾಂಗ್ಲಾ ದೇಶ ತಂಡ ಕೆಂಪು ಬಣ್ಣದ ಜರ್ಸಿ ಅನಾವರಣಗೊಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.