ನವದೆಹಲಿ : ಮುಂಬೈ ಮೂಲದ ಮಹಿಳಾ ಈವೆಂಟ್ ಮ್ಯಾನೇಜರ್ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿದಿದ್ದಾರೆ.
ಹರಿಯಾಣದ ಸೋನಿಪತ್‌ನಲ್ಲಿರುವ ಉಪಾಹಾರ ಗೃಹ ಮಾಲೀಕರಾದ ಸಂದೀಪ್ ಮೆಹ್ತಾ (57) ಮತ್ತು ನವೀನ್ ದಾವರ್ (47) ಬಂಧಿತ ಆರೋಪಿಗಳು.
ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಗೆ ಮೆಹ್ತಾನ ಪರಿಚಯವಾಗಿತ್ತು. ಅವರು ಬುಧವಾರ ದೆಹಲಿಗೆ ಬಂದು ಏರೋಸಿಟಿಯ ಹೋಟೆಲ್‌ನಲ್ಲಿ ತಂಗಿದ್ದರು. ಮರುದಿನ ಮಹಿಳೆ ಕೊನಾಟ್ ಪ್ಲೇಸ್ ನಲ್ಲಿ ಮೆಹ್ತಾ ಮತ್ತು ಅವರ ಸ್ನೇಹಿತ ದಾವರ್ ಅವರನ್ನು ಭೇಟಿಯಾಗಿದ್ದರು.
ಈ ವೇಳೆ ದಾವರ್ ಮಹಿಳೆಗೆ ಕಿರುಕುಳ ನೀಡಲು ಯತ್ನಿಸಿದನು. ಅಷ್ಟೇ ಅಲ್ಲದೆ ಮೆಹ್ತಾ ಹೋಟೆಲ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.