ಬೀಜಿಂಗ್(ಚೀನಾ): ಬಸ್ ಅಥವಾ ಟ್ರೇನ್ ಹತ್ಕೊಂಡು ಪ್ರಯಾಣಿಸಿದರೆ ತುಂಬಾ ದೂರ. ಅದಕ್ಕಾಗಿ ನದಿ ದಾಟ್ಕೊಂಡು 11 ವರ್ಷದಿಂದ ಆಫೀಸ್‌ಗೆ ಕೆಲಸಕ್ಕೆಂದು ಹೋಗುತ್ತಿರುವ ಅಪರೂಪದ ವ್ಯಕ್ತಿಯೊಬ್ಬ ಇಲ್ಲಿದ್ದಾನೆ. ತೂಕ ಇಳಿಸಬೇಕು ಫಿಟ್ ಆಗಿರಬೇಕು ಎಂಬುವವರಿಗೆ ಈತ ಮಾದರಿ.
ಝೂಹ್ ಬಿವೂ.. ಚೀನಾದ ಹುಬೈ ಪ್ರಾಂತ್ಯದ ಹನ್‌ಯಾಂಗ್ ಜಿಲ್ಲೆ ವುಹಾನ್ ಎಂಬ ಊರಿನವನು. ಚೀನಾದ ಕಾರ್ಮಿಕ ಸಂಘಟನೆಯೊಂದರ ಮುಖಂಡ. 53 ವರ್ಷದ ಕಟ್ಟುಮಸ್ತಾಗಿರುವ ಝೂಹ್ 11 ವರ್ಷದ ಹಿಂದೆ ಇಷ್ಟು ಫಿಟ್ ಅಂಡ್ ಫೈನಾಗಿರಲಿಲ್ಲ. ಅನಾರೋಗ್ಯ ಕಾಡ್ತಾಯಿತ್ತು. ಅದಕ್ಕೆ ಕಾರವೂ ಇತ್ತು.
ಸಿಕ್ಕ ಸಿಕ್ಕಂಗೆ ಸಿಕ್ಕಿದ್ದನ್ನೆಲ್ಲ ತಿಂದು ಮೈ ಊದಿಸಿಕೊಂಡ :
18 ವರ್ಷದವನಿದ್ದಾಗಿನಿಂದ ಝೂಹ್ ಬಿವೊ ತರಕಾರಿ ಮಾರ್ಕೆಟ್‌ನಲ್ಲಿ ಪರ್ಚೇಸಿಂಗ್ ಏಜೆಂಟಾಗಿದ್ದ. ಟೈಮಿಗೆ ಸರಿಯಾಗಿ ಊಟ ಮಾಡದೇ, ಸಿಕ್ಕ ಸಿಕ್ಕಾಗ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದ ಕಾರಣ ಯದ್ವಾತದ್ವಾ ಮೈ ಊದಿಸಿಕೊಂಡಿದ್ದ. 1999ರಲ್ಲಿ ಈತನ ತೂಕ ಬರೋಬ್ಬರಿ 100 ಕೆಜಿಗೇರಿತ್ತು. ಟೈಪ್ 2 ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಕೂಡ ಪಡ್ಕೊಂಡಿದ್ದ. ದಿನದಿಂದ ದಿನಕ್ಕೆ ಆರೋಗ್ಯ ಕೈಕೊಡುತ್ತಿದೆ ಅನ್ನೋದನ್ನ ಅರಿತ ಝೂಹ್, ಆರೋಗ್ಯವಾಗಿರಲು ಕೊನೆಗೂ ಒಂದ್ ಐಡಿಯಾ ಮಾಡಿದ. ನಿತ್ಯ ಈಜುತ್ತಲೇ ಆಫೀಸ್‌ಗೆ ಹೊರಟ. ಅದರಿಂದಾಗಿ ಈಗ ಝೂಹ್ ಬಿವೊ 65 ಕೆಜಿಗಿಳಿದಿದ್ದಾನೆ. 2004ರಿಂದ ಈತ ಮೊದಲ ಬಾರಿಗೆ ಈಜುವುದನ್ನ ರೂಢಿಸಿಕೊಂಡ. ಕೆಲಸಕ್ಕೆ ತೆರಳಲು ಅಪರೂಪದ ಮಾರ್ಗ ಕಟ್ಕೊಂಡ ಝೂಹ್ ಕಂಡ್ರೇ ಚೀನಾದಲ್ಲಿ ಭಾರಿ ಫೇಮಸ್.
ನದಿಯೊಳಗೆ 2,200 ಮೀಟರ್ ಅಂತರ ಈಜುತ್ತಾನೆ ಭೂಪ :
ಯಾಂಗ್ಟ್‌ಜಿ ನದಿ ಚೀನಾದ ಅತಿ ದೊಡ್ಡ ನದಿಗಳಲ್ಲೊಂದು. ಇದೇ ನದಿಯೊಳಗೆ ನಿತ್ಯ ಈಜುತ್ತಾನೆ ಝೂಹ್. ಬೆಳಗ್ಗೆ 7 ಗಂಟೆಗೆ ನದಿಗೆ ಧುಮುಕಿ ಅರ್ಧಗಂಟೆಯೊಳಗೆ ದಾಟಿ ಆಫೀಸ್‌ಗೆ ತಲುಪಿರ್ತಾನೆ. ಆ್ಯರೇಂಜ್ ಕಲರ್‌ನ ಎರಡು ವಾಟರ್‌ಪ್ರೂಫ್ ತೇಲುವ ಬ್ಯಾಗ್‌ಗಳನ್ನ ತನ್ನ ಸೊಂಟಕ್ಕೆ ಕಟ್ಟಿಕೊಳ್ತಾನೆ. ಇವು ಸಣ್ಣ ದೋಣಿ ರೀತಿ ನೀರಿನಲ್ಲಿ ತೇಲುತ್ತವೆ. ಈ ಬ್ಯಾಗ್‌ಗಳಲ್ಲೇ ತನ್ನ ಬಟ್ಟೆ, ಶೂ ಸೇರಿ ಮತ್ತಿತರ ವಸ್ತುಗಳನ್ನ ಇರಿಸಿಕೊಳ್ತಾನೆ. ನಿತ್ಯ ಒಟ್ಟು 2,200 ಮೀಟರ್ ಅಥವಾ 7200 ಫೀಟ್ ಅಂತರವನ್ನ ಈಜಿ ಹೋಗುತ್ತಾನೆ. ಒಂದು ವೇಳೆ ಈಜು ಬಿಟ್ಟು ರೈಲು, ಬಸ್ ಅಂತಾ ಪ್ರಯಾಣ ಮಾಡಿದ್ರೇ, ಈತ ಆಫೀಸ್ ತಲುಪೋದಕ್ಕೆ 1 ಗಂಟೆ ಮೇಲೆ ಸಮಯಬೇಕು. ಈಜಿ ಹೋದ್ರೇ ಅರ್ಧಗಂಟೆಯೊಳಗೆ ಆಫೀಸ್ ತಲುಪಲು ಸಾಧ್ಯ. ಈ ರೀತಿ ಈಜುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಫಿಟ್ ಅಂಡ್ ಫೈನಾಗಿರಲು ಸಾಧ್ಯ. ಈಜಲು ಸ್ಟಾರ್ಟ್ ಮಾಡಿದ್ಮೇಲೆ 50 ಕೆಜಿ ತೂಕ ಇಳಿಸಿದ್ದಾನೆ. ಈಗ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದಿದೆ.
ತರಬೇತಿ ಪಡೆಯಿರಿ, ಹಾಗೇ ನೀರಿಗಿಳಿಯೋದು ಒಳ್ಳೇದಲ್ಲ :
ಈತನ ನಡೆಗೆ ಸ್ಥಳೀಯ ಆಡಳಿತ ಬೆರಗಾಗಿದೆ. ಬೇಸಿಗೆಯಲ್ಲಿ ಈಜು ಸ್ಪರ್ಧೆ ಆಯೋಜಿಸಿ ಝೂಹ್ ಬಿವೊಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜನರ ಕೂಡ ತನ್ನಂತೆ ಈಜುತ್ತಾ ಆರೋಗ್ಯ ಕಾಯ್ದುಕೊಳ್ಳಿ ಅಂತಾ ಸಲಹೆ ನೀಡುತ್ತಿದ್ದಾನೆ. ಫಿಟ್‌ನೆಸ್ ಕಾಯ್ದುಕೊಳ್ಳಲು ಈಜುವವರಿಗೆಲ್ಲ ಝೂಹ್ ಬಿವೊ ಈಗ ಮಾದರಿಯಾಗಿದ್ದಾನೆ. ಯಾರೇ ಆದರೂ ಈ ರೀತಿ ಮಾಡೋದಕ್ಕೂ ಮೊದಲೇ ತರಬೇತಿ ಪಡೆದುಕೊಳ್ಳಿ ಅಂತಾ ಬುದ್ಧಿ ಮಾತು ಹೇಳೋದನ್ನ ಈತ ಬಿಡೋದಿಲ್ಲ.
ಫುಡ್ ಮಾರ್ಕೆಟ್ ಮ್ಯಾನೇಜರ್ ಝೂಹ್ ಬಿವೊ :
ಕಂಪನಿಯೊಂದರಲ್ಲಿ ಫುಡ್ ಮಾರ್ಕೆಟ್ ಮ್ಯಾನೇಜರಾಗಿರುವ ಝೂಹ್ ಬಿವೊ, ಆರೋಗ್ಯಯುತ ಜೀವನ ನಡೆಸುತ್ತಿದ್ದಾನೆ. ಬೇರೆಯವರೆಲ್ಲ ಅತೀ ಒತ್ತಡದಲ್ಲಿ ಕೆಲಸ ಮಾಡ್ತಾರೆ. ಆದರೆ, ಈತ ಹಾಗಲ್ಲ. ಸಮಯವನ್ನಷ್ಟೇ ಅಲ್ಲ, ಹಣ ಮತ್ತು ಆರೋಗ್ಯ ಕಾಪಾಡಿಕೊಂಡಿದ್ದಾನೆ. 51 ವಸಂತ ಪೂರೈಸಿದರೂ ಈಗಲೂ ಹರೆಯದ ಹುಡುಗನಂತೆ ಕಾಣ್ತಾನೆ. ನೀವೂ ಇವನಂತೆ ಆಗ್ಬೇಕಲ್ವಾ.. ಹಾಗಾದ್ರೇ ನೀವೂ ಈಜುತ್ತಿರಿ.