ETV Bharat / bharat

ಕಳಪೆ ಆಹಾರ ಪೂರೈಸಿದರೆ ಆರ್ಡರ್​ ಬಂದ್: ಜೊಮ್ಯಾಟೋದಿಂದ 'ಆಹಾರ ಗುಣಮಟ್ಟ ದೂರು' ನೀತಿ - ಕಳಪೆ ಆಹಾರ ಪೂರೈಕೆ ತಡೆಗೆ ಜೊಮ್ಯಾಟೋ ನೀತಿ

ಜೊಮ್ಯಾಟೊ ಆರ್ಡರ್​ ಈಗ ಜಾಸ್ತಿಯಾಗುತ್ತಿದೆ. ಆಹಾರದ ಗುಣಮಟ್ಟವನ್ನು ಕಾಪಾಡಲು ಕಂಪನಿ ಕಠಿಣ ನಿಲುವು ತಳೆದಿದೆ.

Zomato
ಜೊಮ್ಯಾಟೋ
author img

By

Published : Apr 15, 2022, 10:09 PM IST

ಮುಂಬೈ: ಆಹಾರ ಗುಣಮಟ್ಟದ ಬಗ್ಗೆ ಯಾವುದೇ ಗ್ರಾಹಕರು ದೂರು ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸುವುದಲ್ಲದೇ, ಆ ಆಹಾರವನ್ನು ಪೂರೈಸಿದ ರೆಸ್ಟೋರೆಂಟ್​, ಹೋಟೆಲ್​ ವಿರುದ್ಧ ತನಿಖೆ ನಡೆಸಲಾಗುವುದು. ಅಲ್ಲದೇ, ಅಂತಹ ರೆಸ್ಟೋರೆಂಟ್​ಗಳಿಂದ ಆನ್​ಲೈನ್​ ಆರ್ಡರ್​ ಡೆಲಿವರಿಯನ್ನು ತಡೆ ಹಿಡಿಯಲಾಗುವುದು ಎಂದು ಜೊಮ್ಯಾಟೊ ಹೇಳಿದೆ.

ಗ್ರಾಹಕರ ಆರೋಗ್ಯ ಅಥವಾ ಯೋಗಕ್ಷೇಮದ ಮೇಲೆ ಗಂಭೀರ ಹಾನಿಯನ್ನುಂಟು ಮಾಡಬಹುದಾದ ಆಹಾರ ಅಥವಾ ಪಾನೀಯದ ವಿರುದ್ಧ ಗ್ರಾಹಕರು ಆಕ್ಷೇಪ, ದೂರು ಸಲ್ಲಿಸಿದಲ್ಲಿ ಅದನ್ನು 'ಆಹಾರ ಗುಣಮಟ್ಟದ ದೂರು' ಎಂದು ಪರಿಗಣಿಸಲಾಗುತ್ತದೆ. ಈ ನೀತಿ ಏಪ್ರಿಲ್ 18 ರಿಂದ ಜಾರಿಗೆ ಬರಲಿದೆ. ಗ್ರಾಹಕರಿಂದ ದೂರು ಸ್ವೀಕರಿಸಿದ ನಂತರ, ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಜೊಮ್ಯಾಟೋ ತನಿಖೆಯನ್ನು ಕೈಗೊಳ್ಳುತ್ತದೆ ಎಂದು ಅದು ಹೇಳಿದೆ.

ಹೋಟೆಲ್​ನಿಂದಲೇ ತಪಾಸಣೆ ವೆಚ್ಚ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿ ಮಾಡಿದ ಗುಣಮಟ್ಟಕ್ಕಿಂತ ಕಡಿಮೆ ಇರುವ ಆಹಾರವನ್ನು ಪೂರೈಕೆಯಾದರೆ, ಗ್ರಾಹಕರು ನೀಡಿದ ದೂರಿನ ಸ್ವರೂಪವನ್ನು ಅವಲಂಬಿಸಿ ಆ ಹೋಟೆಲ್​ನಿಂದ ಆಹಾರ ಆರ್ಡರ್ ಮಾಡುವುದನ್ನು ತಡೆಹಿಡಿಯಲಾಗುವುದು. ಅಲ್ಲದೇ, ತಪಾಸಣೆಯ ಸಂಪೂರ್ಣ ವೆಚ್ಚವನ್ನೂ ರೆಸ್ಟೋರೆಂಟ್‌ಗಳೇ ಭರಿಸಬೇಕು ಎಂದು ಕಂಪನಿ ಹೇಳಿದೆ.

ಅವಧಿ ಮೀರಿದ, ಮೊದಲೇ ಪ್ಯಾಕ್​ ಮಾಡಲಾಗಿದ್ದ ಪದಾರ್ಥಗಳನ್ನು ಪೂರೈಸುವುದರಿಂದ ಹಿಡಿದು, ಆರ್ಡರ್ ಮಾಡಿದ ಆಹಾರವಲ್ಲದೇ ಬೇರೆ ಆಹಾರ ಪೂರೈಕೆ, ತಿನ್ನಲಾಗದ ವಸ್ತುಗಳು, ಅಪಾಯಕಾರಿ ವಸ್ತುಗಳ ಕಲಬೆರಕೆ, ಶಿಲೀಂಧ್ರ ಅಥವಾ ಕೊಳೆತ ಆಹಾರವನ್ನು ಸರಬರಾಜು ಮಾಡಿದ್ದನ್ನೂ ದೂರಿನಲ್ಲಿ ಪರಿಗಣಿಸಲಾಗುವುದು ಎಂದು ಜೊಮ್ಯಾಟೊ ತಿಳಿಸಿದೆ.

ಏಪ್ರಿಲ್ 18 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದ ಜೊಮ್ಯಾಟೊ ಪ್ರತಿನಿಧಿಯೊಬ್ಬರು, ಹೆಚ್ಚು ಹೆಚ್ಚು ರೆಸ್ಟೋರೆಂಟ್‌ಗಳು ಮತ್ತು ಆಹಾರ ಘಟಕಗಳು ಆನ್‌ಲೈನ್ ಆರ್ಡರ್‌ಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಗ್ರಾಹಕರ ಆರೋಗ್ಯದ ಹಿತದೃಷ್ಟಿಯನ್ನು ಕಾಪಾಡಬೇಕಿದೆ. ನಮ್ಮ ರೆಸ್ಟೋರೆಂಟ್ ಪಾಲುದಾರರು ಮತ್ತು ಗ್ರಾಹಕರ ಹಿತಾಸಕ್ತಿಗಳು ಎರಡೂ ಮುಖ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಉಗ್ರರ ಗುಂಡಿಗೆ ಬಲಿಯಾದ ಬಿಜೆಪಿ ಸರಪಂಚ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.