ಪುಣೆ: ಯೆವ್ಲೆವಾಡಿ ಪ್ರದೇಶದಲ್ಲಿ ಊಟ ವಿತರಿಸಲು ಬಂದ ಜೊಮ್ಯಾಟೋ ಡೆಲಿವರಿ ಬಾಯ್ ಯುವತಿಗೆ ಕಿರುಕುಳ ನೀಡಿರುವ ಪ್ರಕರಣದಲ್ಲಿ ಬಂಧಿತನಾಗಿದ್ದ ಡೆಲಿವರಿ ಬಾಯ್ಗೆ ಸೋಮವಾರ ಪುಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದದ್ದರ ಲಾಭ ಪಡೆದ ಡೆಲಿವರಿ ಬಾಯ್ ಆಕೆಗೆ ಬಲವಂತವಾಗಿ ಮುತ್ತು ನೀಡಿದ್ದನು. ತಕ್ಷಣ 19 ವರ್ಷದ ಯುವತಿ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡೆಲಿವರಿ ಬಾಯ್ಯನ್ನು ಬಂಧಿಸಿದ್ದರು. ಬಂಧಿತ ಜೊಮ್ಯಾಟೊ ಡೆಲಿವರಿ ಬಾಯ್‌ನನ್ನು ರಯೀಸ್ ಶೇಖ್ (40 ವರ್ಷ) ಎಂದು ಗುರುತಿಸಲಾಗಿದೆ.
ಫಿರ್ಯಾದಿದಾರರಾದ ಯುವತಿಯು ಯೆವ್ಲೆವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ, ಝೊಮಾಟೊ ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದರು. ಆರೋಪಿ ರಯೀಸ್ ಶೇಖ್ ರಾತ್ರಿ 9.30ರ ಸುಮಾರಿಗೆ ಆಹಾರ ಪೊಟ್ಟಣದೊಂದಿಗೆ ಅವಳ ಮನೆ ಇರುವ ಜಾಗಕ್ಕೆ ಬಂದಿದ್ದಾನೆ. ಊಟದ ಪೊಟ್ಟಣವನ್ನು ನೀಡಿದ ನಂತರ, ಯುವತಿ ಜೊತೆ ಕುಡಿಯುವ ನೀರು ಕೇಳಿದ್ದಾನೆ. ನೀರು ಕುಡಿದ ನಂತರ ಧನ್ಯವಾದ ಹೇಳುವಂತೆ ನಟಿಸಿ ಯುವತಿ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಹತ್ತಿರಕ್ಕೆ ಎಳೆದು ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ.
ಇದನ್ನೂ ಓದಿ: ಅವಳು ನನ್ನವಳು, ಇಲ್ಲ ನನ್ನವಳು.. ಚಾಲೆಂಜ್ಗೆ ಬಿದ್ದು ಬಾಲಕಿ ರೇಪ್ ಮಾಡಿದ ಯುವಕ ಜೈಲುಪಾಲು!