ನವದೆಹಲಿ : ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್(ZEEL), ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SPNI)ನಲ್ಲಿ ವಿಲೀನ ಒಪ್ಪಂದಕ್ಕೆ ಬುಧವಾರ ಅಂತಿಮ ಮುದ್ರೆ ಬಿದ್ದಿದೆ.
ಹೀಗಾಗಿ, ಝೀ ಮನರಂಜನಾ ಸಂಸ್ಥೆಯ ನೆಟ್ವರ್ಕ್ಗಳು, ಡಿಜಿಟಲ್ ಸ್ವತ್ತುಗಳು, ಪ್ರೋಗ್ರಾಂ ಲೈಬ್ರರಿಗಳನ್ನು ವಿಲೀನ ಮಾಡುವ ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಜಂಟಿ ಹೇಳಿಕೆ ನೀಡಿವೆ.
ಸೆಪ್ಟೆಂಬರ್ನಲ್ಲಿ ಸೋನಿ ಪಿಕ್ಟರ್ ಸಂಸ್ಥೆಯಲ್ಲಿ ಝೀ ವಿಲೀನಕ್ಕೆ ಮುಂದಾದಾಗ ಸೋನಿ ಸಂಸ್ಥೆ 7948 ಕೋಟಿ ರೂಪಾಯಿ ಹೂಡಲಾಗುವುದು ಎಂದು ಸಂಸ್ಥೆ ಘೋಷಿಸಿತ್ತು. ಹೂಡಿಕೆ ಬಳಿಕ ಶೇ.52.93 ಷೇರು ಸೋನಿ ಸಂಸ್ಥೆಯದ್ದಾದರೆ, ಝೀ ಶೇ.47.07 ಪಾಲನ್ನು ಹೊಂದಿದೆ.
ಇದನ್ನೂ ಓದಿ: ಶಸ್ತ್ರಾಸ್ತ್ರಗಳ ಬಿಡಿಭಾಗಗಳ ಪೂರೈಕೆಯಲ್ಲಿ ವಿಳಂಬ..ಯುರೋಪ್ನ ಎಂಬಿಡಿಎ ಸಂಸ್ಥೆಗೆ ಭಾರತದಿಂದ ದಂಡ
ಝೀನ ಮುಖ್ಯ ಕಾರ್ಯನಿರ್ವಾಹಕ ಪುನಿತ್ ಗೋಯೆಂಕಾ ಸಂಯೋಜಿತ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಮುನ್ನಡೆಸಲಿದ್ದಾರೆ.
ಸಂಯೋಜಿತ ಘಟಕದ ನಿರ್ದೇಶಕರ ಮಂಡಳಿಯ ಬಹುಪಾಲು ಸೋನಿ ಗ್ರೂಪ್‌ನಿಂದ ನಾಮ ನಿರ್ದೇಶನಗೊಳ್ಳುತ್ತದೆ. ಪ್ರಸ್ತುತ ಎಸ್‌ಪಿಎನ್‌ಐ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎನ್‌ಪಿ ಸಿಂಗ್ ಅವರನ್ನು ಒಳಗೊಂಡಿರುತ್ತದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.