ETV Bharat / bharat

ರಾಮಲೀಲಾ ವೀಕ್ಷಿಸಲು ತೆರಳಿದ್ದ ಯುವಕನ ಗುಂಡಿಕ್ಕಿ ಹತ್ಯೆ

ಡಿಜೆ ಆಪರೇಟರ್ ಜೊತೆ ಕೆಲಸ ಮಾಡುತ್ತಿದ್ದ ಆಶಿಶ್ (20) ಎಂಬಾತ ತನ್ನ ಸ್ನೇಹಿತನೊಂದಿಗೆ ರಾಮಲೀಲಾ ವೀಕ್ಷಿಸಲು ತೆರಳಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

shot dead
ಗುಂಡಿಕ್ಕಿ ಹತ್ಯೆ
author img

By ETV Bharat Karnataka Team

Published : Oct 20, 2023, 10:58 AM IST

ಗುರುಗ್ರಾಮ್ (ನವದೆಹಲಿ) : ಶುಕ್ರವಾರ ಮುಂಜಾನೆ ಇಲ್ಲಿನ ರಾಮಲೀಲಾ ಪೆಂಡಲ್​ ಹಿಂದೆ ಇಬ್ಬರು ವ್ಯಕ್ತಿಗಳೊಂದಿಗೆ ಜಗಳವಾಡಿದ ಬಳಿಕ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀಮ ನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಡಿಜೆ ಆಪರೇಟರ್ ಜೊತೆ ಕೆಲಸ ಮಾಡುತ್ತಿದ್ದ ಆಶಿಶ್ (20) ಎಂಬಾತ ಸ್ನೇಹಿತನೊಂದಿಗೆ ರಾಮಲೀಲಾ ವೀಕ್ಷಿಸಲು ತೆರಳಿದ್ದ. ಈ ವೇಳೆ ಕೊಲೆ ಮಾಡಲಾಗಿದ್ದು, ಜಗಳಕ್ಕೆ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರೆದಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಶಿಶ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದು, ಆಶಿಶ್ ಅವರ ಚಿಕ್ಕಪ್ಪ ಸೂರಜ್ ನೀಡಿದ ದೂರಿನ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ. "ಗುರುವಾರ ರಾತ್ರಿ ನನ್ನ ಸೋದರಳಿಯ ತನ್ನ ಸ್ನೇಹಿತ ಕರಣ್ ಜೊತೆ ರಾಮಲೀಲಾ ವೀಕ್ಷಿಸಲು ಹೋಗಿದ್ದ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಮಗೆ ಗುಂಡು ತಗುಲಿದ ಮಾಹಿತಿ ಲಭಿಸಿತು. ಆಶಿಶ್ ಸ್ನೇಹಿತರಾದ ಕರಣ್ ಮತ್ತು ಧೀರಜ್ ಅವರು ನೀಡಿದ ಮಾಹಿತಿ ಪ್ರಕಾರ, ನಿಶಿ ಮತ್ತು ರೋಹನ್ ಎಂಬ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಅವರೊಂದಿಗೆ ಆಶಿಶ್ ಜಗಳವಾಡಿದ್ದಾನೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೂರಜ್ ದೂರಿನ ಆಧಾರದ ಮೇಲೆ ನಿಶಿ ಮತ್ತು ರೋಹನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಾಟೆಗೆ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮಧ್ಯರಾತ್ರಿ 12:30 ರ ಸುಮಾರಿಗೆ ಗುಂಡು ಹಾರಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಬಹಿರಾಮ್ ಕಟಾರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ : 20 ವರ್ಷಗಳ ಹಿಂದೆ ' ಮೃತಪಟ್ಟಿದ್ದ ' ನೌಕಾಪಡೆ ಮಾಜಿ ಸಿಬ್ಬಂದಿ ದೆಹಲಿಯಲ್ಲಿ ಪತ್ತೆ , ತ್ರಿವಳಿ ಕೊಲೆ ಕೇಸಲ್ಲಿ ಬಂಧನ

ಗುಂಡಿಕ್ಕಿ ತಾಯಿ, ಮಗಳ ಹತ್ಯೆ : ಪಂಜಾಬ್​ನ ಪತ್ತಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಭುಜೇವಾಲ್ ಗ್ರಾಮದ ಸಮೀಪದ ಅಮರ್ ನಗರದಲ್ಲಿ ತಾಯಿ - ಮಗಳ ಜೋಡಿ ಕೊಲೆ ನಡೆದಿತ್ತು. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮೃತರು ಅಮರ್ ನಗರ ನಿವಾಸಿ ರಂಜಿತ್ ಕೌರ್ ಮತ್ತು ಪುತ್ರಿ ಪ್ರೀತಿ. ಘಟನೆಯಲ್ಲಿ ಪ್ರೀತಿಯ ಮಗು ಶಾಲೆಯಲ್ಲಿ ಇದ್ದುದರಿಂದ ಬದುಕುಳಿದಿದೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಸಾವಿಗೀಡಾಗಿದ್ದ ರಂಜಿತ್ ಕೌರ್ ಮೃತದೇಹವನ್ನು ಪೆಟ್ರೋಲ್​ ಸುರಿದು ಸುಟ್ಟು ಹಾಕಲು ಯತ್ನಿಸಿದ್ದರು.

ಇದನ್ನೂ ಓದಿ : ಪಂಜಾಬ್ : ಗುಂಡಿಕ್ಕಿ ತಾಯಿ, ಮಗಳ ಹತ್ಯೆ ; ಪೆಟ್ರೋಲ್​ ಸುರಿದು ಮೃತದೇಹ ಸುಡಲು ಯತ್ನ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.