ತ್ರಿಶೂರ್(ಕೇರಳ): ಕುನ್ನಂಕುಲಂ ತ್ವರಿತ ವಿಶೇಷ ಪೋಕ್ಸೋ ನ್ಯಾಯಾಲಯವು ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗೆ 50 ವರ್ಷಗಳ ಜೈಲು ಶಿಕ್ಷೆ ಮತ್ತು 60,000 ದಂಡವನ್ನು ವಿಧಿಸಿದೆ. ಕುನ್ನಂಕುಲಂನ ಪೊರ್ಕುಳಂ ಮೂಲದ ಸೈಯುಜ್‌ಗೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿ ಈ ಶಿಕ್ಷೆ ವಿಧಿಸಿದೆ.
2018 ಫೆಬ್ರವರಿಯಲ್ಲಿ ಅಪ್ರಾಪ್ತ ಬಾಲಕಿಯ ಒಂಟಿಯಾಗಿದ್ದಾಗ ಮನೆಯಲ್ಲಿದ್ದಾಗ ಬಲವಂತವಾಗಿ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಈ ಬಗ್ಗೆ ಯಾರಲ್ಲಿಯೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಇದರಿಂದ ಘಟನೆ ಬೆಳಕಿಗೆ ಬಂದಿದ್ದು, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಪೊಲೀಸರು ಸೈಯುಜ್ ಬಂಧಿಸಿ ವಿಚಾರಣೆ ನಡೆಸಿ ಚಾರ್ಜ್ಶೀಟ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ : ಮಾವನ ಆ ಜಾಗಕ್ಕೆ ಒದ್ದು ತುಳಿದು ಹಿಂಸಿಸಿದ ಸೊಸೆ.. ಕ್ರೂರಿಯ ಕೃತ್ಯಕ್ಕೆ ಕಾರಣ ಇದು!