ನಾವಡ( ಬಿಹಾರ): ನಿರಂತರ ಮೊಬೈಲ್ನಲ್ಲಿ ಮುಳುಗಿದ್ದ ಮಗನನ್ನು ತಂದೆ ಗದರಿದ್ದು, ಕೋಪಗೊಂಡ ಮಗ ಡೆಟಾಲ್ ಕುಡಿದಿರುವ ಘಟನೆ ಬಿಹಾರ ರಾಜ್ಯದ ನಾವಡ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗ್ಲಕಾರ್ ಎಂಬಲ್ಲಿ ನಡೆದಿದೆ.
ಮೊಹಮ್ಮದ್ ಅಲಿ ರಾಜಾ ಎಂಬಾತ ಮೊಬೈಲ್ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ. ಈ ವೇಳೆ ಆತನ ತಂದೆ ಮಹಮ್ಮದ್ ಬಬ್ಲು ಮಗನ ಮೊಬೈಲ್ ಪಡೆದುಕೊಂಡು ಆತನಿಗೆ ಬೈದಿದ್ದಾರೆ. ತಂದೆಯ ಮಾತು ಮಗನಿಗೆ ಇಷ್ಟವಾಗದೆ ಕೋಪಗೊಂಡು ಇಡೀ ಬಾಟಲ್ ಡೆಟಾಲ್ನ್ನು ಕುಡಿದು ಮುಗಿಸಿದ್ದಾನೆ. ತಕ್ಷಣವೇ ಆತನನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದು, ಪಾವಪುರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಆನ್ಲೈನ್ ಹೂಡಿಕೆಯಿಂದ ಮೋಸ.. ನೊಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ