ETV Bharat / bharat

ಬೇಸ್ಮೆಂಟ್​ ರಾಡ್​ ಮೇಲೆ ಬಿದ್ದ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ.. ದವಡೆ ಮೂಲಕ ತಲೆ ಮೇಲಿಂದ ಹಾದು ಹೋದ ಕಬ್ಬಿಣ! - ಕರೀಂನಗರ ಅಪರಾಧ ಸುದ್ದಿ

ಬೆಳಗ್ಗೆ ಕೆಲಸಕ್ಕೆ ಬಂದ ಕಾರ್ಮಿಕನೊಬ್ಬ ಕಾಮಗಾರಿ ಸ್ಥಳದಲ್ಲಿ ಬೇಸ್ಮೆಂಟ್​ಗೆ ಹಾಕಲಾಗಿದ್ದ ನಿಂತಿದ್ದ ರಾಡ್​ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ..

Youth dies after Iron rod pierces through his head in Karimnagar, Tragedy in Karimnagar district, Karimnagar crime news, Karimnagar accident news, ಕರೀಂನಗರದಲ್ಲಿ ಕಬ್ಬಿಣದ ರಾಡ್ ತಲೆಗೆ ಸಿಲುಕಿ ಯುವಕ ಸಾವು, ಕರೀಂನಗರ ಜಿಲ್ಲೆಯಲ್ಲಿ ದುರಂತ, ಕರೀಂನಗರ ಅಪರಾಧ ಸುದ್ದಿ, ಕರೀಂನಗರ ಅಪಘಾತ ಸುದ್ದಿ,
ದವಡೆ ಮೂಲಕ ತಲೆ ಮೇಲಿಂದ ಹಾದು ಹೋದ ಕಬ್ಬಿಣ
author img

By

Published : May 14, 2022, 2:03 PM IST

ಕರೀಂನಗರ : ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕನೊಬ್ಬ ನಿಂತ ಕಬ್ಬಿಣದ ಸರಪಳಿಗಳ ಮೇಲೆ ಬಿದ್ದಿದ್ದು, ಕಬ್ಬಿಣ ರಾಡ್​ವೊಂದು ಆತನ ದವಡೆ ಕೆಳ ಭಾಗದಿಂದ ತಲೆ ಮೇಲೆ ಹಾದು ಹೋಗಿರುವ ಎದೆ ಝಲ್​ ಎನ್ನಿಸುವ ಘಟನೆಯೊಂದು ಜಿಲ್ಲೆಯ ಹುಜೂರಾಬಾದ್​ನಲ್ಲಿ ನಡೆದಿದೆ.

ಏನಿದು ಘಟನೆ : ಆರ್‌ಟಿಸಿಡಿಪಿ ಡಿಪೋ ಕ್ರಾಸಿಂಗ್​ ಬಳಿ ಮೋರಿ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯ ಬೂದಿಗಜಂಗಲ ಕಾಲೋನಿಯ ಮೌಟಂ ರಾಜು (36) ಗೋಡೆಗೆ ನೀರು ಹಾಕಲು ಬಂದಿದ್ದಾರೆ. ನೀರು ಹಾಕುತ್ತಲೇ ಆಕಸ್ಮಿಕವಾಗಿ ತಳಪಾಯಕ್ಕೆ (ಬೇಸ್ಮೆಂಟ್​) ಹಾಕಲಾಗಿದ್ದ ಕಬ್ಬಿಣದ ಸರಪಳಿ ಮೇಲೆ ಬಿದ್ದಿದ್ದಾರೆ. ಈ ವೇಳೆ ರಾಜು ದವಡೆ ಕೆಳ ಭಾಗದಿಂದ ಅವನ ತಲೆ ಮೇಲೆ ರಾಡ್‌ ಹಾದು ಹೋಗಿದೆ.

ಓದಿ: ಅಂಗಡಿಯೊಂದರಲ್ಲಿ ಕುಳಿತಿದ್ದ ಯುವಕನ ಮೇಲೆ ಕಬ್ಬಿಣದ ರಾಡ್​​ನಿಂದ ಹಲ್ಲೆ.. ಭೀಕರ ವಿಡಿಯೋ ವೈರಲ್​!

ರಾಜು ನೋವಿನಿಂದ ಬಳಲುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 8.30ಕ್ಕೆ ಈ ಘಟನೆ ಸಂಭವಿಸಿದ್ದು, ಸುಮಾರು ಮೂರು ಗಂಟೆಗಳ ಕಾಲ ರಾಜು ನರಕಯಾತನೆ ಅನುಭವಿಸಿದ್ದಾರೆ. ರಾಜುವಿನ ಸ್ಥಿತಿ ನೋಡಿದ ಸ್ಥಳೀಯರ ಕಣ್ಣಲ್ಲಿ ನೀರು ತರಿಸಿತು. ಸ್ಥಳಕ್ಕೆ ತಲುಪಿದ ವೈದ್ಯ ಸಿಬ್ಬಂದಿ ರಾಜನ ತಲೆಗೆ ಸಿಲುಕಿದ್ದ ಬೇಸ್ಮೆಂಟ್​ ರಾಡ್ ಅ​ನ್ನು ಯಂತ್ರದ ಸಹಾಯದಿಂದ ಕತ್ತರಿಸಿದರು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪ್ರಥಮ ಚಿಕಿತ್ಸೆ ಬಳಿಕ ಉತ್ತಮ ಚಿಕಿತ್ಸೆಗಾಗಿ ಬೆಳಗ್ಗೆ 11.20ಕ್ಕೆ ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ರಾಜುವನ್ನು ದಾಖಲಿಸಲಾಯಿತು. 11.35ಕ್ಕೆ ಕಬ್ಬಿಣದ ರಾಡ್ ತೆಗೆದ ತಕ್ಷಣ ರಾಜು ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.