ETV Bharat / bharat

ಕೃಷಿ ಮಸೂದೆ ವಿರೋಧಿ ಹೋರಾಟದ ವೇಳೆ ಮಡಿದ ರೈತರಿಗಾಗಿ ಕಾಂಗ್ರೆಸ್​ನಿಂದ ಈ ಕ್ಯಾಂಪೇನ್​​! - ಕೃಷಿ ಮಸೂದೆ ವಿರುದ್ಧ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ರೈತರ ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ಕೆಲ ರೈತರು ಸಾವನ್ನಪ್ಪಿದ್ದಾರೆ. ಇವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡುವ ಉದ್ದೇಶದಿಂದ ಯೂತ್ ಕಾಂಗ್ರೆಸ್​ ಹೊಸ ಕ್ಯಾಂಪೇನ್​​ ಆರಂಭಿಸಿದೆ.

Youth Congress
Youth Congress
author img

By

Published : Jan 9, 2021, 6:01 PM IST

ನವದೆಹಲಿ: ಕೇಂದ್ರದ ಮೂರು ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಕೆಲ ಅನ್ನದಾತರು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿರುವ ರೈತರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡುವ ಉದ್ದೇಶದಿಂದ ಯೂತ್​ ಕಾಂಗ್ರೆಸ್,​ 'ಒಂದು ಹಿಡಿ ಮಣ್ಣು ಹುತಾತ್ಮರ ಹೆಸರಿನಲ್ಲಿ' (Ek Mutthi Mitti Shaheedon Ke Naam) ಎಂಬ ಕ್ಯಾಂಪೇನ್​​ ಆರಂಭಿಸಿದೆ. ದೇಶದ ಪ್ರತಿಯೊಂದು ಜಿಲ್ಲೆಯಿಂದ ಒಂದು ಹಿಡಿ ಮಣ್ಣು ಸಂಗ್ರಹ ಮಾಡಿ ದೆಹಲಿಯಲ್ಲಿ ಭಾರತದ ಮ್ಯಾಪ್​ ತಯಾರಿಸಲಿದ್ದಾರೆ.

ಯೂತ್ ಕಾಂಗ್ರೆಸ್​ನಿಂದ ಕ್ಯಾಂಪೇನ್​

ಭಾರತದ ಮ್ಯಾಪ್​ ಮಾಡಿದ ಬಳಿಕ ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ರವಾನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜತೆ ಯೂತ್​ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​ ಬಿ.ವಿ. ಮಾತನಾಡಿದ್ದು, ಪ್ರತಿಭಟನೆ ವೇಳೆ ಸುಮಾರು 60 ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಒಂದೇ ಒಂದು ಸಲ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮನ್ನು ಬಡ ಕಾರ್ಮಿಕರ, ರೈತನ ಮಗ ಎಂದು ಬಣ್ಣಿಸುವ ಪ್ರಧಾನಿ ಮೋದಿ ವಾಷಿಂಗ್ಟನ್​ ಪ್ರಜಾಪ್ರಭುತ್ವದ ಬಗ್ಗೆ ಚಿಂತೆ ಮಾಡುತ್ತಾರೆ. ಆದರೆ ತಮ್ಮ ನಿವಾಸದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿ ಪ್ರತಿಭಟನೆ ಮಾಡುತ್ತಿರುವ ಲಕ್ಷಾಂತರ ರೈತರ ಧ್ವನಿ ಕೇಳಲು ಸಮಯವಿಲ್ಲ ಎಂದಿದ್ದಾರೆ.

ಯೂತ್​ ಕಾಂಗ್ರೆಸ್ ಜಂಟಿ ಕಾರ್ಯದರ್ಶಿ ಕೃಷ್ಣಾ ಅಲ್ಲಾವಾರು ಮಾತನಾಡಿ, ಕೇಂದ್ರದಲ್ಲಿ ಯಾರೂ ನಾಯಕರಿಲ್ಲ. ಎಲ್ಲರೂ ಡೀಲರ್​ ಆಗಿದ್ದಾರೆ. ಕೇಲವ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡ್ತಿದ್ದು, ರೈತರನ್ನು ತುಳಿಯುವ ಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.