ETV Bharat / bharat

ಮಾದಕವಸ್ತು ಪುನರ್ವಸತಿ ಕೇಂದ್ರದಲ್ಲಿ ಯುವಕನ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಹಟಿಂಗಾವ್​ ಪ್ರದೇಶದ ಅಜಂತಾ ರಸ್ತೆ

ಗುವಾಹಟಿಯ ಮಾದಕವಸ್ತು ಪುನರ್ವಸತಿ ಕೇಂದ್ರದಲ್ಲಿ ಭೀಕರ ಹತ್ಯೆ- ಯುವಕನ್ನು ಕೊಲೆಗೈದ ಆರೋಪಿಯ ಬಂಧನ- ಕೃತ್ಯದ ದೃಶ್ಯ ಸಿಸಿಟಿಯಲ್ಲಿ ಸೆರೆ

assam
ಯುವಕನ ಹತ್ಯೆ
author img

By

Published : Feb 14, 2023, 2:02 PM IST

Updated : Feb 14, 2023, 3:28 PM IST

ಸಿಸಿಟಿವಿ ದೃಶ್ಯ

ಗುವಾಹಟಿ (ಅಸ್ಸೋಂ): ಅಸ್ಸೋಂ ಗುವಾಹಟಿ ನಗರದಲ್ಲಿ ಭೀಕರ ಹತ್ಯೆಯೊಂದು ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಜೀವನದಲ್ಲಿ ದುರಾಭ್ಯಾಸಗಳನ್ನು ರೂಢಿಸಿಕೊಂಡ ನಾಗರಿಕರನ್ನು ಬದಲಾಯಿಸುವ ಕೇಂದ್ರವಾಗಿದ್ದ ಮಾದಕವಸ್ತು ಪುನರ್ವಸತಿ ಕೆಂದ್ರಗಳು ಇದೀಗ ಕೊಲೆ, ಹಿಂಸಾಚಾರದ ಕೇಂದ್ರವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಗುವಾಹಟಿಯಲ್ಲೊಂದು ಕೃತ್ಯ ನಡೆದಿದ್ದು, ಜನರಲ್ಲಿ ಆತಂಕ ಹುಟ್ಟು ಹಾಕಿದೆ.

ಹಟಿಂಗಾವ್​ ಪ್ರದೇಶದ ಅಜಂತಾ ರಸ್ತೆಯಲ್ಲಿರುವ ಮಿರಾಕಲ್​ ರಿಹ್ಯಾಬ್​ ಸೆಂಟರ್​ನಲ್ಲಿ ಯುವಕನನ್ನು ಹರಿತವಾದ ಆಯುಧದಿಂದ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಈ ಆಘಾತಕಾರಿ ದೃಶ್ಯವು ಕೇಂದ್ರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಅರಿಂದಮ್​ ಖೌಂಡ್​ ಎಂದು ಗುರುತಿಸಲಾಗಿದೆ. ಅದೇ ಪುನರ್ವಸತಿ ಕೇಂದ್ರದಲ್ಲಿ ತಂಗಿದ್ದ ಅಮೀನೂರ್​ ಹುಸೇನ್​ ಕೊಲೆಗೈದ ಆರೋಪಿಯಾಗಿದ್ದು, ಹಟಿಂಗಾವ್​ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಕೊಲೆ ಯಾಕಾಗಿ ನಡೆಯಿತು? ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯಲ್ಲಿ ಅಮೀನೂರ್​ ಹುಸೇನ್​, ಅರಿಂದಮ್​ ಖೌಂಡ್​ ಮೇಲೆ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಇದನ್ನೂ ಓದಿ: ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಆರೋಪ.. ಶಾಸಕ ನೆಹರು ಓಲೇಕಾರ್, ಮತ್ತವರ ಇಬ್ಬರು ಮಕ್ಕಳಿಗೆ ಜೈಲು ಶಿಕ್ಷೆ

ಪುನರ್ವಸತಿ ಕೇಂದ್ರಕ್ಕೆ ಸಂಬಂಧಿಸಿ ಅರಿಂದಮ್​ ಖೌಂಡ್​ ಮತ್ತು ಅಮೀನೂರ್​ ಹುಸೇನ್​ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅಮೀನೂರ್ ಸಡನ್ನಾಗಿ ಅರಿಂದಮ್ ಅವರನ್ನು ಥಳಿಸುತ್ತಿರುವ ದೃಶ್ಯವೂ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕೇಂದ್ರದಲ್ಲಿ ಕೆಲವು ಯುವಕರು ಕೊಲೆಗೆ ಸಾಕ್ಷಿಯಾಗಿದ್ದಾರೆ. ಅವರಲ್ಲಿ ಒಬ್ಬರು ಹಲ್ಲೆ ನಡೆಸುತ್ತಿದ್ದ ಅಮೀನೂರ್​ ಅನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆ ಹೊತ್ತಿಗಾಗಲೇ ಅರಿಂದಮ್​ ಖೌಂಡ್​ಗೆ ಮಾರಣಾಂತಿಕ ಗಾಯಗೊಂಡಿದ್ದರು. ಕೋಪದಲ್ಲಿದ್ದ ಅಮೀನೂರ್​ ಹುಸೇನ್​ ಅರಿಂದಮ್​ ಖೌಂಡ್​ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಜೊತೆಗೆ ಬಲಿಪಶುವಿನಂತೆ ಆತನಿಗೆ ಚೆನ್ನಾಗಿ ಹೊಡೆದಿದ್ದಾನೆ. ಇದರಿಂದ ಅರಿಂದಮ್​ ಖೌಂಡ್​ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಅಲ್ಲಿದ್ದ ಯುವಕರು ಮೂಕಪ್ರೇಕ್ಷಕರಂತೆ ದೃಶ್ಯವನ್ನು ನೋಡಿಯೇ ಬಾಕಿ ಆಗಿದ್ದರು. ಕೊನೆಯ ಕ್ಷಣದಲ್ಲಿ ಅವರಲ್ಲಿ ಒಬ್ಬರು ಅಮೀನೂರ್​ ಅನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಇದೀಗ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯದಿಂದ ಬರ್ಬರ ಹತ್ಯೆ ನಡೆದಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಪೊಲೀಸ್ ತನಿಖೆಯ ನಂತರವಷ್ಟೇ ಕೊಲೆಯ ನಿಜವಾದ ಕಾರಣ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಅಸ್ಸೋಂ ಮಾದಕವಸ್ತು ಪುನರ್ವಸತಿ ಕೇಂದ್ರಗಳಲ್ಲಿ ಏನು ನಡೆಯುತ್ತಿದೆ? ಎಂಬುದು ಜನರಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಜೊತೆಗೆ ಮಾದಕವಸ್ತು ಪುನರ್ವಸತಿ ಕೇಂದ್ರಗಳು ದಾಳಿ ಮತ್ತು ಹಿಂಸಾಚಾರದ ಕೇಂದ್ರವಾಗಿ ಮಾರ್ಪಟ್ಟಿದ್ದು, ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಅಕ್ರಮ ಜಾನುವಾರು ಸಾಗಣೆ ತಡೆದ ಗೋರಕ್ಷರನ್ನು ಅರೆಬೆತ್ತಲೆಗೊಳಿಸಿ ಥಳಿತ.. ಪೊಲೀಸ್​ ಅಧಿಕಾರಿ ಅಮಾನತು

ದೇಶದಲ್ಲಿ ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ ಮಾದಕವಸ್ತು ಪುನರ್ವಸತಿ ಕೇಂದ್ರದಲ್ಲಿ ಇಂತಹ ಘಟನೆಗಳು ನಡೆದಿರುವುದು ನಿಜಕ್ಕೂ ಭಯ ಹುಟ್ಟಿಸಿದೆ. ಜೊತೆಗೆ ಇದ್ದ ಹುಡುಗರು ತಮ್ಮೊಳಗಿದ್ದ ಮನಸ್ತಾಪದಿಂದ ಈ ರೀತಿಯಾಗಿ ಮಾಡಿಕೊಂಡಿದ್ದಾರಾ? ಅಥವಾ ಬೇರೆ ಏನಾದರೂ ವಿಷಯಗಳು ಕೊಲೆಗೆ ಕಾರಣವಾಗಿದೆಯಾ? ಎಂಬುದು ತನಿಖೆ ಬಳಿಕ ಬಯಲಾಗಬೇಕಿದೆ.

Last Updated : Feb 14, 2023, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.