ನಾಗ್ಪುರ( ಮಹಾರಾಷ್ಟ್ರ): ಕುರ್ಚಿಗೆ ಕೈ, ಕಾಲು ಮತ್ತು ಕುತ್ತಿಗೆಗೆ ನೈಲಾನ್ ಹಗ್ಗದಿಂದ ಕಟ್ಟಿ ಶೃಂಗಾರ ನಡೆಸಿದ ಬಳಿಕ ಯುವಕ ಸಾವನ್ನಪ್ಪಿರುವ ಘಟನೆ ಖಾಪರ್ಖೇಡ್ ಗ್ರಾಮದ ಲಾಡ್ಜ್ವೊಂದರಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ನಾಗ್ಪುರ ನಿವಾಸಿ 30 ವರ್ಷದ ಯುವಕನೊಬ್ಬ ಸ್ಥಳೀಯ ಮಹಿಳೆಯೊಬ್ಬಳ ಜೊತೆ ಐದು ವರ್ಷದಿಂದಲೂ ವಿವಾಹೇತರ ಸಂಬಂಧ ಹೊಂದಿದ್ದನು. ಗುರುವಾರ ರಾತ್ರಿ ಖಾಪರ್ಖೇಡ್ ಗ್ರಾಮದ ಲಾಡ್ಜ್ನಲ್ಲಿ ಇವರಿಬ್ಬರು ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶೃಂಗಾರ ಸಮಯದಲ್ಲಿ ಮಹಿಳೆ ಆ ಯುವಕನ ಕೈ, ಕಾಲು ಮತ್ತು ಕುತ್ತಿಗೆಗೆ ನೈಲಾನ್ ಹಗ್ಗದಿಂದ ಕುರ್ಚಿಯೊಂದಕ್ಕೆ ಬೀಗಿಯಾಗಿ ಕಟ್ಟಿದ್ದಾಳೆ. ಬಳಿಕ ಲೈಂಗಿಕ ಕ್ರಿಯೆ ನಡೆಸಿ ಮಹಿಳೆ ಸ್ನಾನ ಮಾಡಲು ಬಾತ್ರೂಂಗೆ ತೆರಳಿದ್ದಾಳೆ. ಈ ವೇಳೆ ಯುವಕ ಹಗ್ಗ ಬಿಡಿಸಲು ಯತ್ನಿಸಿದಾಗ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾನೆ. ಕುತ್ತಿಗೆಗೆ ಹಗ್ಗ ಬಿಗಿಯಾಗಿ ಕಟ್ಟಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಮೊಬೈಲ್ನಲ್ಲಿ ಪಾರ್ನ್ ವಿಡಿಯೋ ನೋಡಿ ಹೆಚ್ಚು ಸುಖ ಅನುಭವಿಸಲು ಈ ರೀತಿ ಮಾಡಿದ್ದಾರೆ. ಆದ್ರೆ ಯುವಕ ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಮಹಿಳೆ ಮೇಲೆ ಕೊಲೆ ಆರೋಪ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಖಾಪರ್ಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.